ಸಕಲೇಶಪುರ: ಅತಿ ಶೀಘ್ರವಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಂಡಿ ಮುಚ್ಚಿಸುವ ಕಾಮಗಾರಿ ಆರಂಭವಾಗುತ್ತದೆ ಎಂದು ಶಾಸಕ ಹೆಚ್.ಕೆ ಕುಮಾರಸ್ವಾಮಿ ಆಶ್ವಾಸನೆ ನೀಡಿದರು.
ಶಾಸಕ ಹೆಚ್.ಕೆ.ಕುಮಾರಸ್ವಾಮಿ ಭರವಸೆ ಪಟ್ಟಣದಲ್ಲಿ ಬೈಪಾಸ್ ರಸ್ತೆ ಕಾಮಗಾರಿ ವೀಕ್ಷಿಸಿದ ನಂತರ, ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಹಾಸನದಿಂದ ಮಾರನಹಳ್ಳಿವರೆಗಿನ 47 ಕಿ.ಮೀ. ಕಾಮಗಾರಿ ನಡೆಯುತ್ತಿದ್ದು, ಸಕಲೇಶಪುರ ಪಟ್ಟಣ ವ್ಯಾಪ್ತಿಯ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದರು.
ಇಲ್ಲಿ ತೆಗೆದ ಮಣ್ಣಿನ ಪರಿಣಾಮ ಹಲವು ಸರ್ಕಾರಿ ಹಾಗೂ ಖಾಸಗಿ ಜಾಗಗಳಿಗೆ ಹಾನಿಯುಂಟಾಗುತ್ತಿದೆ. ರಸ್ತೆ ಮಾಡುವುದರ ಜೊತೆಗೆ ತಡೆಗೋಡೆಗಳನ್ನು ನಿರ್ಮಿಸಬೇಕು ಹಾಗೂ ಮಲ್ಲಿಕಾರ್ಜುನ ನಗರ ಸಮೀಪ ಪ್ಲೈಓವರ್ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾನ್ ಬಾಜ್ ಮಾತನಾಡಿ, ಮಳೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಈಗಾಗಲೇ ಪ್ರಾರಂಭವಾಗಿದೆ. ಅತಿ ಶೀಘ್ರವಾಗಿ ಇಲ್ಲಿನ ಗುಂಡಿ ಬಿದ್ದಿರುವ ರಸ್ತೆಯನ್ನು ಸರಿಪಡಿಸಲಾಗುತ್ತದೆ ಹಾಗೂ 2022ರ ಅಂತ್ಯದ ಒಳಗೆ ಈ ಕಾಮಗಾರಿ ಮುಗಿಸಲಾಗುತ್ತದೆ ಎಂದರು.
ವಿನಯ್, ಉಮೇಶ್, ಜೆಡಿಎಸ್ ಮುಖಂಡರುಗಳಾದ ಭಾಸ್ಕರ್, ಹೆಬ್ಬಸಾಲೆ ಪ್ರಕಾಶ್ ಇದ್ದರು.