ಕರ್ನಾಟಕ

karnataka

ETV Bharat / state

ಶಿಲ್ಪ ಕಲೆಗಳ ತವರಲ್ಲಿ ತುಂಡುಡುಗೆ ತೊಟ್ಟು ನಂಗಾನಾಚ್​​... ಸದ್ದು ಮಾಡ್ತಿದೆ ವಿಡಿಯೋ ​​ - Ganesha fest

ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ, ಶಿಲ್ಪ ಕಲೆಗಳ ತವರೂರಲ್ಲಿ ನಂಗಾನಾಚ್​ ನಡೆದಿದೆ. ಈ ವಿಡಿಯೋ ವೈರಲ್​ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ನಂಗನಾಚ್

By

Published : Sep 22, 2019, 1:51 PM IST

ಹಾಸನ: ಗಣೇಶ ನಿಮಜ್ಜನದ ಉತ್ಸವದಲ್ಲಿ ಶುಕ್ರವಾರ ಸಂಜೆ ಯುವತಿಯವರಿಂದ ನಂಗಾನಾಚ್ ಮಾಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಶಿಲ್ಪ ಕಲೆಗಳ ತವರೂರಲ್ಲಿ ಈ ಪ್ರಕರಣ ನಡೆಯುವ ಮೂಲಕ ಜಿಲ್ಲೆಯ ಮಾನ ಹರಾಜಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ನಂಗಾನಾಚ್

ಗಣೇಶ ನಿಮಜ್ಜನ ಸಂದರ್ಭದಲ್ಲಿ ಗ್ರಾಮದ ಗಣಪತಿ ಸೇವಾ ಸಮಿತಿಯವರು ಬೆಂಗಳೂರಿನಿಂದ ಡ್ಯಾನ್ಸ್ ತಂಡದವರನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ರು. ಈ ವೇಳೆ ಆ ತಂಡದ ನೃತ್ಯಗಾರ್ತಿಯರು ತುಂಡುಡುಗೆಗಳನ್ನು ಧರಿಸಿ ನೃತ್ಯ ಮಾಡೋ ಮೂಲಕ ನೆರೆದಿದ್ದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ರೆ, ಇನ್ನೂ ಕೆಲವರು ಮಾನ ಮರ್ಯಾದೆ ಇಲ್ಲ ಅಂತ ಬೈಕೊಂಡು ವೇದಿಕೆಯಿಂದ ವಾಪಸ್ ಮನೆಗೆ ಹೋದ್ರು.

ವಾಟರ್ ಬಾಟಲ್ ನಲ್ಲಿ ಮದ್ಯ:
ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಓರ್ವ ಯುವತಿ ತುಂಡುಡುಗೆ ಹಾಕಿಕೊಂಡು, ಕೈಯಲ್ಲಿ ಮದ್ಯ ತುಂಬಿದ್ದ ವಾಟರ್ ಬಾಟಲ್​ನಲ್ಲಿ ನೆರೆದಿದ್ದ ಯುವಕರಿಗೆ ಕೊಟ್ಟಿದ್ದಾಳೆ ಎಂಬ ಆರೋಪ ಸಹ ಕೇಳಿಬಂದಿದೆ.

ABOUT THE AUTHOR

...view details