ಕರ್ನಾಟಕ

karnataka

ETV Bharat / state

ರಾಮ ಮಂದಿರ ದೇಣಿಗೆ ವಿಚಾರ: ಸಿದ್ದರಾಮಯ್ಯ, ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಕಟೀಲ್​​ - ನಳಿನ್ ಕುಮಾರ್ ಕಟೀಲ್

ರಾಮ ಮಂದಿರ ದೇಣಿಗೆ ವಿಚಾರ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ವಿರುದ್ಧ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದು, ತಮ್ಮ ರಾಜಕೀಯ ಗುರುಗಳನ್ನು ತುಳಿದು ಬಂದವರು ರಾಮ ಮಂದಿರದ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡುತ್ತಾರೆ ಎಂದರೆ ಇದು ರಾಮ ಮಂದಿರಕ್ಕೆ ಅವಮಾನವಲ್ಲ, ಸುಪ್ರೀಂ ಕೋರ್ಟಿಗೆ ಮಾಡಿದ ಅಪಮಾನ ಎಂದು ಇಬ್ಬರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

nalin-kumar-kateel-jibe-on-siddramaiah-and-kumaraswamy
ಸಿದ್ದರಾಮಯ್ಯ, ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಕಟೀಲ್​​

By

Published : Feb 18, 2021, 8:23 PM IST

Updated : Feb 18, 2021, 9:10 PM IST

ಹಾಸನ: ಅಧಿಕಾರ ಇಲ್ಲದಿದ್ದಾಗ ಅಹಿಂದ ಅನ್ನುವವರು ಅಧಿಕಾರ ಇದ್ದಾಗ ಸ್ವಹಿಂದ ಮಾಡಿದವರು ನೀವು. ಈಗ ರಾಮ ಮಂದಿರ ಬೇಡ ಅಂತೀರಾ.? ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

ಹಾಸನದ ಹೊರವಲಯದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ರಾಜ್ಯಮಟ್ಟದ ಪ್ರಕೋಷ್ಠ ಸಭೆಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ಕಟ್ಟಿ ಅಂತ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ರಾಮ ಮಂದಿರ ನಿರ್ಮಾಣ ಮಾಡ್ತಾ ಇರೋದು ರಾಮ ಮಂದಿರ ನಿರ್ಮಾಣ ಟ್ರಸ್ಟ್. ಬಿಜೆಪಿ ಪಕ್ಷವಾಗಲಿ, ಆರ್​ಎಸ್​ಎಸ್​​ ಸಂಘಟನೆಯಾಗಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿಲ್ಲ. ರಾಮ ಮಂದಿರ ಬೇಡ ಎನ್ನುವವರು ನೀವು ಸುಪ್ರೀಂ ಕೋರ್ಟ್ ಅಪಮಾನ ಮಾಡಿದಂತೆ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಸಿದ್ದರಾಮಯ್ಯ, ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಕಟೀಲ್​​

ಇನ್ನು ಹಾಸನದವರು, ಬಹಳ ಶ್ರೇಷ್ಠರು. ಸದಾ ನಿಂಬೆಹಣ್ಣು ಹಿಡಿದು ಓಡಾಡುವವರು. ಪ್ರತಿನಿತ್ಯ ಜ್ಯೋತಿಷ್ಯರನ್ನು ಕೇಳಿ ಹೆಜ್ಜೆ ಇಡುವವರು. ವಿಧಾನಸಭೆಗೆ ಬರುವಾಗಲೂ ಜ್ಯೋತಿಷ್ಯ ಕೇಳುವವರು. ನೀವು ದೇವರ ಪೂಜೆ ಮಾಡುವುದನ್ನು ನೋಡಿ ನಿಮ್ಮ ಮನೆಗೆ ರಾಮ ಮಂದಿರ ನಿರ್ಮಾಣ ಮಾಡುತ್ತಿರುವ ಭಕ್ತರು ಬಂದಿರಬಹುದು. ಆದರೆ ನೀವು ಹೇಳೋದು ನಮ್ಮ ಮನೆಗೆ ಬಂದು ಹಣ ಕೇಳಿದವರು ಗೂಂಡಾಗಳು ಎಂದು. ಬಹುಶಃ ನೀವು ಸಿಎಂ ಆಗಿದ್ದಾಗ ಕೆಲಸ ಮಾಡಿಕೊಡಲು ಹಣ ಪಡೆದಿರಬಹುದು. ಹಾಗಾಗಿ ರಾಮ ಮಂದಿರ ನಿರ್ಮಾಣದ ಹಣ ವಂತಿಕೆ ಮಾಡಲು ಬಂದ ರಾಮ ಭಕ್ತರು ನಿಮಗೆ ಗೂಂಡಾಗಳ ರೀತಿ ಕಂಡಿರಬಹುದು. ನೀವು ಗೂಂಡಾ ಸಂಸ್ಕೃತಿಯಿಂದ ಬೆಳೆದು ಬಂದಿದ್ದೀರಿ. ಅದಕ್ಕೆ ನಿಮ್ಮ ಕನಸಿನಲ್ಲಿ ಗೂಂಡಾಗಳು ಬರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧವೂ ಕಿಡಿಕಾರಿದ್ದಾರೆ.

ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಇಬ್ಬರು ಮುಖ್ಯಮಂತ್ರಿಗಳಾಗಲಿ ತಮ್ಮ ರಾಜಕೀಯ ಗುರುಗಳನ್ನು ತುಳಿದು ಬಂದವರು. ರಾಮ ಮಂದಿರದ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡುತ್ತಾರೆ ಎಂದರೆ ಇದು ರಾಮ ಮಂದಿರಕ್ಕೆ ಅವಮಾನವಲ್ಲ, ಸುಪ್ರೀಂ ಕೋರ್ಟಿಗೆ ಮಾಡಿದ ಅಪಮಾನ. ಈ ದೇಶಕ್ಕೆ ಮಾಡಿದ ಅಪಮಾನ ಎಂದು ಇಬ್ಬರ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಶಾಸಕ ಯತ್ನಾಳ್ ಮೇಲೆ ಯಾವ 'ಆಸಕ್ತಿ'ಯೂ ಇಲ್ಲ: ಅರುಣ್ ಸಿಂಗ್​​​

Last Updated : Feb 18, 2021, 9:10 PM IST

ABOUT THE AUTHOR

...view details