ಕರ್ನಾಟಕ

karnataka

ETV Bharat / state

ಶಾಸಕ ಯತ್ನಾಳ್ ಮೇಲೆ ಯಾವ 'ಆಸಕ್ತಿ'ಯೂ ಇಲ್ಲ: ಅರುಣ್ ಸಿಂಗ್​​​ - Arun singh outrage against yatnal

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆರೋಪಿಸಿದ್ದಾರೆ.

my-focus-is-only-on-the-party-workers-arun-singh
ಅರುಣ್ ಸಿಂಗ್

By

Published : Feb 18, 2021, 7:55 PM IST

ಹಾಸನ: ನನಗೆ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಮೇಲೆ ಯಾವುದೇ ಆಸಕ್ತಿ ಇಲ್ಲ ಎಂದು ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಬಿಜೆಪಿಯ ರಾಜ್ಯ ಪ್ರಕೋಷ್ಠ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡಲಾರೆ. ಯತ್ನಾಳ್ ಎಂದರೆ ನಿಮಗೆ ಯಾಕೆ ಅಷ್ಟೊಂದು ಪ್ರೀತಿ?. ನನಗೆ ಯಾರ ಬಗ್ಗೆಯೂ ಇಂಟರೆಸ್ಟ್ ಇಲ್ಲ, ನನಗೆ ಪಾರ್ಟಿ ಕಾರ್ಯಕರ್ತರ ಮೇಲೆ ಮಾತ್ರ ಗಮನ ಇದೆ ಎಂದರು.

ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ಓದಿ:ಬಿಜೆಪಿ ರಾಜ್ಯ‌ ಉಸ್ತುವಾರಿ ಅರುಣ್​ ಸಿಂಗ್ ಭೇಟಿ ಮಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

ನಿಗಮ-ಮಂಡಳಿ ಹಂಚಿಕೆ ವಿಚಾರವಾಗಿಯೂ ನನಗೆ ಯಾವುದೇ ಐಡಿಯಾ ಇಲ್ಲ. ರೈತರ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಪ್ರತಿಭಟನೆ ಮಾಡಿದವರು ಸಾಮಾನ್ಯ ಜನರಲ್ಲ, ಅವರ ಹಿಂದೆ ಕಾಂಗ್ರೆಸ್ ಪಕ್ಷವಿದೆ ಎಂದು ಆರೋಪಿಸಿದರು.

ABOUT THE AUTHOR

...view details