ಹಾಸನ:ತಾಲೂಕಿನ ಹೂವಿನಹಳ್ಳಿ ಕಾವಲು ಬಳಿ ವಿದ್ಯುತ್ ಪ್ರಸರಣ ನಿಗಮ ನೌಕರನಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಅರೆಕಲ್ಲು ಹೊಸಹಳ್ಳಿ ಗ್ರಾಮದ ಸಂತೋಷ್ (36) ಕೊಲೆಯಾದ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೂವಿನಹಳ್ಳಿ ಕಾವಲು ಗ್ರಾಮದ ಹೊಲದಲ್ಲಿ ಶವ ಪತ್ತೆಯಾಗಿದ್ದು, ಕಳೆದ ರಾತ್ರಿ ಕೆಲವು ಸ್ನೇಹಿತರು ಪಾರ್ಟಿ ಮಾಡಿದ್ದು, ನಂತರ ಸಂತೋಷನನ್ನು ಕೊಲೆ ಮಾಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಶವದ ಪಕ್ಕದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು ಹಾಗೂ ಊಟವನ್ನ ತಂದಿದ್ದ ಪಾಕೆಟ್ಗಳು ಪಾರ್ಟಿ ಮಾಡಿರುವುದಕ್ಕೆ ಸಾಕ್ಷಿಯಂತಿವೆ. ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ಮಾಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಹಾಸನದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.