ಕರ್ನಾಟಕ

karnataka

ETV Bharat / state

ಹಾಸನ: ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದ ಆರೋಪಿಗಳು ಕೊನೆಗೂ ಅರೆಸ್ಟ್​

ಹಾಸನದ ಮೊಸಳೆಹೊಸಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ಕತ್ತು ಹಿಸುಕಿ ಕೊಲೆ ಮಾಡಿ, ಕೊಲೆ ಮರೆಮಾಚಲು ಅಪಘಾತವಾಗಿದೆ ಎಂದು ಬಿಂಬಿಸಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆ
ಕೊಲೆ

By

Published : Jun 16, 2022, 9:41 AM IST

ಹಾಸನ: ಆತ ಸಂಸಾರಕ್ಕೆ ದುಡಿಯುತ್ತಿದ್ದ ಯಜಮಾನ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು. ಒಂದು ಸುಂದರ ಸಂಸಾರ. ಆಗಾಗ, ಪತಿ- ಪತ್ನಿ ನಡುವೆ ಸಣ್ಣಪುಟ್ಟ ಜಗಳ ನಡೀತಾ ಇತ್ತು. ಆದರೆ, ಅದೊಂದು ದಿನ ಗಂಡ ಹೆಂಡತಿ ಜಗಳ ವಿಕೋಪಕ್ಕೆ ತಿರುಗಿ ಗಂಡನ ಜೀವವೇ ಹೋಯ್ತು. ಗಂಡ ಸತ್ತಿದ್ದು ಆಕ್ಸಿಡೆಂಟ್‌ನಿಂದ ಎಂದು ಬಿಂಬಿಸೋಕೆ ಹೋದ ತಾಯಿ, ಮಗ ಈಗ ಜೈಲು ಪಾಲಾಗಿದ್ದಾರೆ.

ಹೌದು, ಜೂನ್ 5ರ ರಾತ್ರಿ ಬೈಕ್‌ನಿಂದ ಬಿದ್ದ ಸ್ಥಿತಿಯಲ್ಲಿ 52 ವರ್ಷದ ಕೃಷ್ಣೇಗೌಡ ಸಾವನ್ನಪ್ಪಿದ್ದರು. ಮೂಲತಃ ಶಾಂತಿಗ್ರಾಮ ಹೋಬಳಿ ಬಸ್ತಿಹಳ್ಳಿ ಗ್ರಾಮದವರಾದ ಕೃಷ್ಣೇಗೌಡ, ಮೊಸಳೆಹೊಸಳ್ಳಿ ಸಮೀಪ ಹೆಂಡತಿ ಮನೆಯಲ್ಲೇ ವಾಸವಿದ್ದರು. ಮನೆಯ ಸಮೀಪದ ರಸ್ತೆಯಲ್ಲಿ ಕೃಷ್ಣೇಗೌಡ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಹಾಸನದಲ್ಲಿ ನಡೆದ ಕೊಲೆ ಪ್ರಕರಣ

ಮುಖದ ಭಾಗಕ್ಕೆ ಆಯುಧದಿಂದ ಕೊಯ್ದ ಹಾಗೆ ಕಾಣುತ್ತಿತ್ತು. ಈ ಬಗ್ಗೆ ಅನುಮಾನಗೊಂಡು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇದು ಅಪಘಾತವಲ್ಲ, ಕೊಲೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆ ನಡೆಸಿದ ವೇಳೆ ಮೃತ ವ್ಯಕ್ತಿಯ ಪತ್ನಿ, ಸ್ವಂತ ಮಗ ಹಾಗೂ ಅತ್ತೆಯೇ ಈ ಕೊಲೆಗೆ ಕಾರಣರು ಅನ್ನೋದು ದೃಢವಾಗಿದೆ.

ಕೃಷ್ಣೇಗೌಡ ಮತ್ತು ಜ್ಯೋತಿಗೆ ಕಳೆದ 32 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ಮನೆಯಲ್ಲಿದ್ದರೆ, ಮತ್ತೊಬ್ಬ ಬೆಂಗಳೂರಿನಲ್ಲಿ ಕೆಲಸ ಮಾಡ್ಕೊಂಡಿದ್ದ. ಕೃಷ್ಣೇಗೌಡ ಹಲವು ವರ್ಷಗಳಿಂದ ಹೆಂಡತಿ ಮನೆಯಲ್ಲಿಯೇ ಇದ್ದ, ಇತ್ತೀಚೆಗೆ ಹೆಂಡತಿ, ಮಗ ಹಾಗೂ ಅತ್ತೆ ಮೂವರು ಕುಡಿತದ ಚಟಕ್ಕೆ ಒಳಗಾಗಿದ್ದರು. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ ಜಗಳ ನಡೀತಾ ಇತ್ತು.

ವಾರದ ಹಿಂದೆ ಇದೇ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸಿಕೊಂಡು ಗಲಾಟೆ ಮಾಡಿಕೊಂಡಿದ್ದಾರೆ. ಬಳಿಕ ಹರಿತವಾದ ಆಯುಧದಿಂದ ಮುಖದ ಭಾಗಕ್ಕೆ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆಯನ್ನು ಮರೆಮಾಚಲು ಅಪಘಾತವಾಗಿದೆ ಎಂದು ಬಿಂಬಿಸಲು ಬೈಕ್ ಸಮೇತ ಮೃತ ದೇಹವನ್ನು ಮನೆಯ 500 ಮೀಟರ್ ದೂರದ ರೈಸ್ ಮಿಲ್ ಹತ್ತಿರದ ರಸ್ತೆಗೆ ರಾತ್ರೋರಾತ್ರಿ ತಂದು ಹಾಕಿದ್ದಾರೆ. ಪಕ್ಕದಲ್ಲಿ ಒಂದು ಬೈಕ್ ಕೂಡ ಬೀಳಿಸಿ, ಬೈಕ್​ನಿಂದ ಸತ್ತಿದ್ದಾನೆಂದು ಬಿಂಬಿಸಿದ್ದಾರೆ‌. ಪ್ರಕರಣದಲ್ಲಿ ಪತ್ನಿ, ಮಗ ಹಾಗೂ ಅತ್ತೆ ಭಾಗಿಯಾಗಿದ್ದು, ಮೂವರನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಕೇದಾರನಾಥದ ರಣಭಯಂಕರ ಪ್ರವಾಹಕ್ಕೆ 9 ವರ್ಷ.. ಇಲ್ಲಿದೆ ಕರಾಳ ದಿನಗಳ ನೆನಪು

ABOUT THE AUTHOR

...view details