ಹಾಸನ: ಬೇಲೂರಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮೀನು ಮಾರಾಟ ಕೇಂದ್ರಗಳನ್ನು ಇಂದು ಬೆಳಗ್ಗೆ ಪುರಸಭೆ ಅಧಿಕಾರಿಗಳು ಪೊಲೀಸರ ಸಹಾಯದಿಂದ ಸ್ಥಳಾಂತರಿಸಿದರು.
ಈ ಹಿಂದೆಯೇ ಮೀನು ಮಾರುಕಟ್ಟೆ ಸ್ಥಳಾಂತರಿಸುವಂತೆ ಪುರಸಭೆ ವತಿಯಿಂದ ನೋಟಿಸ್ ನೀಡಲಾಗಿತ್ತು. ಆದರೂ ಮೀನು ಮಾರಟಗಾರರು ಸ್ಥಳ ಖಾಲಿ ಮಾಡದ ಹಿನ್ನೆಲೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು ಇಂದು ಮಾರುಕಟ್ಟೆಯನ್ನು ಸ್ಥಳಾಂತರಿಸಲಾಯಿತು.
ಬೆಳ್ಳಬೆಂಳಿಗ್ಗೆ ಫೀಲ್ಡಿಗಿಳಿದ ಪುರಸಭೆ ಅಧಿಕಾರಿಗಳು ಇನ್ನು ಮೀನು ಮಾರಾಟಗಾರರಿಗೆ ಪುರಸಭೆಯು ಹರಾಜಿನಲ್ಲಿ ಪಡೆದ ಜಾಗಗಳಿಗೆ ಹೋಗುವಂತೆ ಸೂಚಿಸಿದ್ದು, ಮತ್ತೆ ಇದೇ ರೀತಿ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ವ್ಯಾಪಾರಸ್ಥರ ಮತ್ತು ಪುರಸಭೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದ ಹಿನ್ನೆಲೆ, ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಿಸುವಲ್ಲಿ ಹರಸಾಹಸ ಪಡಬೇಕಾಯಿತು.