ಕರ್ನಾಟಕ

karnataka

ETV Bharat / state

ದೂರು ಕೊಟ್ಟರೂ ಕ್ಯಾರೆನ್ನದ ಪೊಲೀಸರು: ಮನೆಗೆ ನುಗ್ಗಿ ಅಕ್ರಮ ಮದ್ಯ ನಾಶಪಡಿಸಿದ ಗ್ರಾಮಸ್ಥರು - ಮದ್ಯ ನಾಶಪಡಿಸಿದ ಮಳಲಿ ಗ್ರಾಮಸ್ಥರು

ಅಕ್ರಮ ಮದ್ಯ ಮಾರಾಟದಿಂದ ಬೇಸತ್ತ ಗ್ರಾಮಸ್ಥರು ಮದ್ಯ ಮಾರಾಟಗಾರರ ಮನೆಗೆ ನುಗ್ಗಿ ಅಕ್ರಮವಾಗಿ ಸಂಗ್ರಹಿಸಿದ್ದ ಸಾವಿರಾರು ರೂ. ಮೌಲ್ಯದ ಮದ್ಯವನ್ನು ನಾಶಪಡಿಸಿದರು.

mulali-villagers-destroyed-illegal-liquor
ಮದ್ಯ ನಾಶ ಪಡಿಸಿದ ಮಳಲಿ ಗ್ರಾಮಸ್ಥರು

By

Published : Nov 7, 2021, 5:43 PM IST

ಹಾಸನ:ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ ಮನೆಗೆ ನುಗ್ಗಿ, ಮದ್ಯವನ್ನು ಬೀದಿಗೆ ತಂದು ನಾಶಪಡಿಸಿದ ಘಟನೆ ಹಾಸನ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.


ಮಳಲಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ಗ್ರಾಮಸ್ಥರು ಸಾಕಷ್ಟು ಬಾರಿ ಜಿಲ್ಲಾಡಳಿತ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ಅಕ್ರಮ ಮದ್ಯ ಮಾರಾಟಗಾರರ ಮನೆಗೆ ನುಗ್ಗಿ, ಮನೆಯಲ್ಲಿ ಸಂಗ್ರಹಿಸಿದ್ದ ಮದ್ಯ ಹೊತ್ತುತಂದು ನಾಶಪಡಿಸಿದರು.

ವಿಚಾರ ತಿಳಿದು ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸರು ಆಗಮಿಸಿದರು. ಪರಿಶೀಲನೆ ನಡೆಸಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶಾಂತಿಗ್ರಾಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details