ಕರ್ನಾಟಕ

karnataka

ETV Bharat / state

ಸರ್ವವ್ಯಾಪಿ ಕೊರೊನಾ: ಜಿಲ್ಲಾಡಳಿತದ ಮುಂಜಾಗ್ರತಾ ಕ್ರಮಗಳನ್ನು ಶ್ಲಾಘಿಸಿದ ಸಂಸದ ಪ್ರಜ್ವಲ್ ರೇವಣ್ಣ

ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ , ಬಿಸಿಎಂ ಹಾಸ್ಟೆಲ್​, ಎಪಿಎಂಸಿ ಆವರಣಕ್ಕೆ ಭೇಟಿ ನೀಡಿದ್ದ ಸಂಸದ ಪ್ರಜ್ವಲ್​ ರೇವಣ್ಣ ಕೊರೊನಾ ಸೋಂಕಿತರಿಗಾಗಿ ಹಾಸಿಗೆಗಳನ್ನು ಮೀಸಲಿರಿಸಿರುವುದನ್ನು ಖಚಿತ ಪಡಿಸಿಕೊಂಡರು. ಅನಂತರ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

MP Prajwal Rewanna praised the precautionary measures of the district administration
ಜಿಲ್ಲಾಡಳಿತದ ಮುಂಜಾಗ್ರತಾ ಕ್ರಮಗಳನ್ನು ಶ್ಲಾಘಿಸಿದ ಸಂಸದ ಪ್ರಜ್ವಲ್ ರೇವಣ್ಣ

By

Published : Apr 2, 2020, 8:15 AM IST

ಹಾಸನ:ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮುಂದಾದರೆ ಕೊರೊನಾವನ್ನು ತಡೆಗಟ್ಟಲು ಸಾಧ್ಯ ಎಂದು ಹಾಸನ‌ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ , ಬಿಸಿಎಂ ಹಾಸ್ಟಲ್, ಎಪಿಎಂಸಿ ಆವರಣಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು ತಾಲೂಕಿನಲ್ಲಿ ಕೊರೊನಾ ಹರಡದಂತೆ ಮುಂಜಾಗ್ರತ ಕ್ರಮವಾಗಿ ತಾಲೂಕು ಆಡಳಿತ ಕೈಗೊಂಡಿರುವ ಕಾರ್ಯಗಳನ್ನು ನೋಡಲು ಆಗಮಿಸಿದ್ದೇನೆ. ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಮುಂಜಾಗ್ರತ ಕ್ರಮವಾಗಿ ಕೊರೊನಾ ರೋಗಿಗಳಿಗಾಗಿ ಹಾಸಿಗೆಗಳನ್ನು ಮೀಸಲಿರಿಸಲಾಗಿದ್ದು, ಇಲ್ಲಿನ ಆಡಳಿತ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರುವುದು ಶ್ಲಾಘನೀಯ ಎಂದರು.

ಈ ಕೊರೊನಾ ಹಾವಳಿಯಿಂದ ಪಾರಾಗಲು ಸಾರ್ವಜನಿಕರು ಸಾಧ್ಯವಾದಷ್ಟು‌ ಮನೆಯಲ್ಲಿದ್ದು, ಅನಿರ್ವಾಯ ಸಂದರ್ಭದಲ್ಲಿ ಮಾತ್ರ ಹೊರ ಬರಬೇಕು. ಜನರು ಕೊರೊನಾದ ಬಗ್ಗೆ ಆತಂಕ‌ ಪಡುವುದು ಬೇಡ. ಯಾವುದೇ ರೀತಿಯ ಕಾಯಿಲೆಯ‌ ಮುನ್ಸೂಚನೆ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಲಿ ಉತ್ತಮ‌ ಗುಣಮಟ್ಟದ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲೆ ಲಭ್ಯವಿದೆ ಎಂದರು.

ಕೋವಿಡ್ 19 ಮಹಾಮಾರಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ, ತಾಲೂಕು ಆಡಳಿತದ ಕಾರ್ಯಗಳ ಕುರಿತು ಪ್ರತಿನಿತ್ಯ ವಿಡಿಯೋ ಕಾನ್ಸ್ ಫರೆನ್ಸ್ ನ ಮುಖಾಂತರ ಮಾಹಿತಿಗಳನ್ನು ಪಡೆದು ನಿರ್ದೇಶನ‌ ನೀಡಲಾಗುತ್ತಿದೆ. ಹೀಗಾಗಿ ಯಾರು ಆತಂಕದಲ್ಲಿ ಬದುಕುವುದು ಬೇಡ ಆದರೆ, ಎಚ್ಚರದಿಂದಿರಿ ಎಂದರು.

ABOUT THE AUTHOR

...view details