ಹಾಸನ :ಬಿಜೆಪಿ ಸರ್ಕಾರ ಜನರ ಗಮನ ಬೇರೆಡೆ ಸೆಳೆಯಲು ನಟಿಯರನ್ನ ಬಂಧಿಸ್ತಿದೆ. ಇದನ್ನ ಪ್ರಚಾರಕ್ಕಾಗಿ ರಾಜ್ಯ ಸರ್ಕಾರ ಬಳಸಿಕೊಳ್ತಿದೆ ಅಂತಾ ಸಂಸದ ಡಿ ಕೆ ಸುರೇಶ್ ಆರೋಪಿಸಿದ್ದಾರೆ.
ಜನರ ಗಮನ ಬೇರೆಡೆ ಸೆಳೆಯಲು ಪ್ರಚಾರಕ್ಕಾಗಿ ನಟಿಯರ ಬಂಧನ- ಸಂಸದ ಡಿ ಕೆ ಸುರೇಶ್ - MP D.K.Suresh statement
ಗಾಂಜಾ, ಅಫೀಮ್‌ನ ಯಾರು ಸಪ್ಲೈ ಮಾಡುತ್ತಿದ್ದಾರೆಯೋ ಅವರನ್ನು ಹಿಡಿಯುತ್ತಿಲ್ಲ. ಸಿನಿಮಾದವರನ್ನು ಹಿಡಿಯುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ. ಯಾರದೋ ಹೇಳಿಕೆ ಇಟ್ಟುಕೊಂಡು ಬಿಜೆಪಿ ಹಣ ವಸೂಲಿ ಕೆಲಸ ಮಾಡುತ್ತಿದೆ. ಇಷ್ಟು ದಿನ ಡ್ರಗ್ಸ್ ಮಾಫಿಯಾ ಬಗ್ಗೆ ಕಣ್ಮುಚ್ಚಿ ಕುಳಿತಿದ್ರಾ..? ಡ್ರಗ್ಸ್ ವಿಚಾರದಲ್ಲಿ ಪೊಲೀಸ್ ಮತ್ತು ಸರ್ಕಾರ ನೇರ ಹೊಣೆಯಾಗುತ್ತದೆ..
ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಗಡಿ ಹಾಗೂ ರಾಮ ಮಂದಿರ ವಿಚಾರದಲ್ಲಿ ಗಮನ ಜನರ ಸೆಳೆಯುತ್ತಿದೆ. ಕರ್ನಾಟಕದಲ್ಲಿ ಕೋವಿಡ್‌ನಿಂದ ಜನ ಸಾಯುತ್ತಿದ್ದಾರೆ. ಇದರ ಬಗ್ಗೆ ಯಾವುದೇ ಶಾಸಕರು, ಸಚಿವರು ಮತ್ತು ಸಂಸದರು ಧ್ವನಿ ಎತ್ತುತ್ತಿಲ್ಲ. ಸರ್ಕಾರ ಜನರ ಗಮನ ಬೇರೆಡೆ ಸೆಳೆಯಲು ನಟ-ನಟಿಯರು ಡ್ರಗ್ಸ್ ದಂಧೆಯನ್ನ ಪ್ರಚಾರ ಮಾಡಿ, ವಿಷಯಾಂತರ ಮಾಡುತ್ತಿದೆ. ಡ್ರಗ್ಸ್ ತೆಗೆದುಕೊಂಡರೆ ಪೊಲೀಸರು ಕ್ರಮ ತೆಗೆದಗೊಳ್ಳುತ್ತಾರೆ. ಬಿಜೆಪಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಗಾಂಜಾ, ಅಫೀಮ್‌ನ ಯಾರು ಸಪ್ಲೈ ಮಾಡುತ್ತಿದ್ದಾರೆಯೋ ಅವರನ್ನು ಹಿಡಿಯುತ್ತಿಲ್ಲ. ಸಿನಿಮಾದವರನ್ನು ಹಿಡಿಯುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ. ಯಾರದೋ ಹೇಳಿಕೆ ಇಟ್ಟುಕೊಂಡು ಬಿಜೆಪಿ ಹಣ ವಸೂಲಿ ಕೆಲಸ ಮಾಡುತ್ತಿದೆ. ಇಷ್ಟು ದಿನ ಡ್ರಗ್ಸ್ ಮಾಫಿಯಾ ಬಗ್ಗೆ ಕಣ್ಮುಚ್ಚಿ ಕುಳಿತಿದ್ರಾ..? ಡ್ರಗ್ಸ್ ವಿಚಾರದಲ್ಲಿ ಪೊಲೀಸ್ ಮತ್ತು ಸರ್ಕಾರ ನೇರ ಹೊಣೆಯಾಗುತ್ತದೆ ಎಂದರು.
ಪ್ರಚಾರಕ್ಕಾಗಿ ನಟ, ನಟಿಯರನ್ನು ಬಂಧಿಸುತ್ತಿದ್ದಾರೆ ಹೊರತು ಬೇರೇನೂ ಉದ್ದೇಶವಿಲ್ಲ. ಮೂಲವನ್ನು ಬೇಟೆಯಾಡಬೇಕು. ಮೂಲ ಇಲ್ಲದೆ ಉಪಯೋಗಿಸುವವರನ್ನು ಹಿಡಿದು ವಿಷಯ ಡೈವೋರ್ಟ್ ಮಾಡುತ್ತಿದ್ದಾರೆ. ಇದು ಸಾರ್ವಜನಿಕರಿಗೆ ಅರ್ಥವಾಗಬೇಕು. ಕನ್ನಡ ಚಿತ್ರರಂಗ ವಿಶೇಷ ಸ್ಥಾನ ಹೊಂದಿದೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ ಎಂದರು.
ಡ್ರಗ್ಸ್ ವಿಚಾರದಲ್ಲಿ ಹಿರಿಯ ರಾಜಕಾರಣಿಗಳು, ಬ್ಯುಸ್ನೆಸ್ ಮ್ಯಾನ್ಗಳ ಮಕ್ಕಳ ರಕ್ಷಣೆ ನಡೆಯುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಸತ್ಯವೂ ಇರಬಹುದು. ಹೀಗಾಗಿ ನಟ-ನಟಿಯರನ್ನು ಹಿಡಿಯುವ ತಂತ್ರಗಾರಿಕೆ ನಡೆಯುತ್ತಿದೆ. ಎಲ್ಲ ಪಕ್ಷದ ರಾಜಕಾರಣಿಗಳು, ಬ್ಯುಸಿನೆಸ್‌ದಾರರ ಮಕ್ಕಳ ಹೆಸರು ಹೇಳಿಕೊಂಡು ದಂಧೆ ನಡೆಯುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆ ಹೆಸರು ಇದೆ ಎಂದು ಹೆದರಿಸುತ್ತಿದ್ದಾರೆಯೇ ಹೊರತು ಅವರನ್ನು ಹಿಡಿಯಲು ಹೋಗುತ್ತಿಲ್ಲ ಎಂದರು.