ಹಾಸನ: ಕುಟುಂಬ ರಾಜಕಾರಣದ ಮೂಲಕ ಕಾರ್ಯಕರ್ತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಚುನಾವಣೆಗೆ ಹಾಸನ ಕ್ಷೇತ್ರದಿಂದ ತೆಂಕನಹಳ್ಳಿ ಎಂ.ಶಂಕರ್ ನಾಮಪತ್ರ ಸಲ್ಲಿಸಿದ ಬಳಿಕ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ದೇವೇಗೌಡರು ಮಾತ್ರ ರಾಜಕೀಯ ಪ್ರವೇಶ ಮಾಡಿದ್ದರು. ಬಳಿಕ ಮಕ್ಕಳು, ಸೊಸೆಯಂದಿರು, ಈಗ ಮೊಮ್ಮಕ್ಕಳು ಸಹ ಪ್ರವೇಶ ಮಾಡಿದ್ದಾರೆ. ಇದು ಕುಟುಂಬ ರಾಜಕಾರಣ ಎಂಬುದು ನಿಮಗೆ ತಿಳಿದಿದ್ದರೂ ಇನ್ನೂ ಆ ಪಕ್ಷದಲ್ಲಿ ಕಾರ್ಯಕರ್ತರಾಗಿದ್ದೀರಾ?. ನಮ್ಮ ಪಕ್ಷಕ್ಕೆ ಬನ್ನಿ. ಕಾಂಗ್ರೆಸ್ ಯಾವಾಗಲೂ ಜನರ ಸೇವೆಗಾಗಿ ಇರುವಂತಹ ಪಕ್ಷ ಎಂದರು.
ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ.ಸುರೇಶ್ ರೈತರ ಮಕ್ಕಳು ಯಾವತ್ತು ರೈತರ ಪರವಾಗಿ ಇರುತ್ತಾರೆ. ಆದ್ರೆ ಸ್ವಂತ ಕುಟುಂಬದವರು ರೈತರ ಪರ ಮಾತನಾಡುವುದಿಲ್ಲ. ಬದಲಿಗೆ ಕುಟುಂಬದ ಮಕ್ಕಳ ಬಗ್ಗೆ ಹೆಚ್ಚು ಚಿಂತನೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿರುವುದನ್ನು ನೀವು ಗಮನಿಸಿ, ರಾಜ್ಯದಲ್ಲಿ ಬದಲಾವಣೆ ತರಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಮಳೆ ಅವಾಂತರ: ಬಿಬಿಎಂಪಿ ಇಂಜಿನಿಯರ್ಗಳ ತುರ್ತು ಸಭೆ ಕರೆದ ಸಿಎಂ
ಕಾಂಗ್ರೆಸ್ ಮುಖಂಡ ದಿನೇಶ್ ಬೈರೇಗೌಡ ಮಾತನಾಡಿ, ಈ ಬಾರಿ ಅರಕಲಗೂಡು ಸೇರಿದಂತೆ 8 ತಾಲೂಕಿನಿಂದ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚು ಮತ ಕೊಡಿಸುವ ಮೂಲಕ ವಿಧಾನಪರಿಷತ್‌ಗೆ ಕಳುಹಿಸಿಕೊಡಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡೋಣ ಎಂದು ಕರೆ ನೀಡಿದರು.