ಕರ್ನಾಟಕ

karnataka

ETV Bharat / state

ಎರಡು ದಶಕಗಳಿಂದ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳಿಗೆ ಆಹಾರ ಸೇವೆ; ಇವರು ದಣಿವರಿಯದ ಸತ್ಯಮ್ಮ

ಹಾಸನದ ಸತ್ಯಮ್ಮ ಎಂಬ ವೃದ್ಧೆ ಕಳೆದ 20 ವರ್ಷಗಳಿಂದಲೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ತಮ್ಮ ಮನೆಯಿಂದಲೇ ಊಟೋಪಚಾರ ಮಾಡುತ್ತಾ ಬಂದಿದ್ದಾರೆ.

mother's day special stories
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಳ ಸೇವೆ

By

Published : May 10, 2020, 4:56 PM IST

ಹಾಸನ:ಮಕ್ಕಳಿಲ್ಲದ ಇವರಿಗೆ ಸ್ಕೌಟ್ಸ್ ವಿದ್ಯಾರ್ಥಿಗಳೇ ಮಕ್ಕಳು. ಕಳೆದ ಎರಡು ದಶಕಗಳಿಂದ ನಿರಂತರವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ನಡುವೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡು ಅವರಿಗೆ ತಾಯಿಯಂತೆ ಆರೈಕೆ ಮಾಡುತ್ತಿದ್ದಾರೆ.

ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಜೊತೆ ಇತರೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸತ್ಯಮ್ಮ

ಸತ್ಯಮ್ಮ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ತಮ್ಮ ಮನೆಯಿಂದಲೇ ಊಟ ತಿಂಡಿ ನೀಡುತ್ತಾರೆ. ಅಷ್ಟೇ ಅಲ್ಲ, ಹಾಸನಾಂಬ ದರ್ಶನ ಪ್ರಾರಂಭವಾದ ದಿನದಿಂದ ಕೊನೆಯ ದಿನದ ತನಕ ಪ್ರತಿವರ್ಷ ಪ್ರಸಾದ ನೀಡುವ ಮೂಲಕ ಸಾಮಾಜಿಕ ಸೇವೆಯನ್ನು ಕೂಡ ಮಾಡುತ್ತಿದ್ದಾರೆ.

ಗಿಡ ನೆಡುವ ಕಾರ್ಯಕ್ರಮ, ಆರೋಗ್ಯ ಅರಿವು ಕಾರ್ಯಕ್ರಮ ಸೇರಿದಂತೆ ಕಲ್ಯಾಣಿ ಸ್ವಚ್ಛತೆ ಸೇರಿದಂತೆ ಇನ್ನಿತರ ಹತ್ತಾರು ಸಾಮಾಜಿಕ ಕಾರ್ಯ ಕಾರ್ಯಗಳಿಗೆ ಇವರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.ಇಂತಹ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡ ಸತ್ಯಮ್ಮ ಈಟಿವಿ ಭಾರತ​​ ಜೊತೆ ತಮ್ಮ ಮನದಾಳ ಹಂಚಿಕೊಂಡರು.

ABOUT THE AUTHOR

...view details