ಕರ್ನಾಟಕ

karnataka

ETV Bharat / state

ಅಮ್ಮಾ ನಿನಗೆ ಬೇಡವಾದೆನಾ...? ಹೆತ್ತ ಮಗುವನ್ನೇ ಬಿಟ್ಟುಹೋದ ತಾಯಿ! - ಲಾಕ್ ಡೌನ್ ಸಡಿಲಿಕೆ

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ತಳಲೂರು ಗ್ರಾಮದಲ್ಲಿ ಹೆತ್ತ ತಾಯಿಯೊಬ್ಬಳು ಹಸುಗೂಸನ್ನು ಬಿಟ್ಟು ಹೋಗಿರುವ ಘಟನೆ ನಡೆದಿದೆ

baby
baby

By

Published : May 5, 2020, 10:28 AM IST

ಹಾಸನ:ಕೊವೀಡ್-19 ಮಧ್ಯೆ ಹೆತ್ತ ತಾಯಿಯೊಬ್ಬಳು ಹಸುಗೂಸನ್ನು ಬಿಟ್ಟು ಹೋಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ತಳಲೂರು ಗ್ರಾಮದಲ್ಲಿ ಇಂತಹುದೊಂದು ಮನಕಲಕುವ ಘಟನೆ ಜರುಗಿದೆ. ಹೆತ್ತಮ್ಮ ಲಾಕ್ ಡೌನ್ ನಡುವೆ ತನ್ನ ಮಗುವನ್ನು ಮರದ ಕೊಂಬೆಗೆ ಜೋಲಿ ಕಟ್ಟಿ, ಮಲಗಿಸಿ ಹೋಗಿರುವ ದೃಶ್ಯ ಮನಕಲಕುವಂತಿತ್ತು.

ಹೆತ್ತ ಮಗುವನ್ನೇ ಬಿಟ್ಟುಹೋದ ತಾಯಿ

ಲಾಕ್ ಡೌನ್ ಸಡಿಲಿಕೆಯಿಂದ ಕೆಲವರು ವಾಯುವಿಹಾರ ಮಾಡಲು ಬಂದ ವೇಳೆ ಮಗು ಅಳುವ ಶಬ್ದ ಕೇಳಿದೆ. ಮರದ ಬಳಿ ಬಂದಾಗ ಮಗುವನ್ನ ಕಂಡು ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ.

ಗ್ರಾಮಸ್ಥರು ಹೇಳುವ ಪ್ರಕಾರ ನಮ್ಮ ಸುತ್ತಮುತ್ತಲಿನಲ್ಲಿರುವ ಗರ್ಭಿಣಿಯರು ಚಿರಪರಿಚಿತರಾಗಿದ್ದು, ಅವರ್ಯಾರು ಈ ಕೃತ್ಯ ಮಾಡಿಲ್ಲ. ಬಹುಶಃ ಹೊರಗಿನಿಂದ ಬಂದು ಹೆಣ್ಣು ಮಗು ಎಂಬ ಕಾರಣಕ್ಕೋ, ಅಥವಾ ಮತ್ತ್ಯಾವುದೋ ಕಾರಣಕ್ಕೋ ಇಲ್ಲಿಗೆ ಬಂದು ಬಿಟ್ಟುಹೋಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ABOUT THE AUTHOR

...view details