ಹಾಸನ:ಕ್ಷುಲ್ಲಕ ಕಾರಣಕ್ಕೆ ಸಂಬಂಧಿಕರ ಮಗಳಿಗೆ ಸ್ವಂತ ಅತ್ತೆಯೇ ಬರೆ ಹಾಕಿರುವ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಬಾಲಕಿಗೆ ಬರೆ ಎಳೆದ ಅತ್ತೆ! - ಹಾಸನ ಕ್ರೈಂ ಸುದ್ದಿ
ಕ್ಷುಲ್ಲಕ ಕಾರಣಕ್ಕೆ ಸಂಬಂಧಿಕರ ಮಗಳಿಗೆ ಸ್ವಂತ ಅತ್ತೆಯೇ ಬರೆ ಹಾಕಿ ಹಲ್ಲೆ ಎಸಗಿರುವ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಪಟ್ಟಣದ ಪೌರ ಕಾರ್ಮಿಕ ಶಿವಕುಮಾರ್ ಎಂಬುವವರ ಮಗಳು ಹಲ್ಲೆಗೊಳಗಾದ ಬಾಲಕಿ. ಶಿವಕುಮಾರ್ ಬಾಗಿನ ನೀಡಲು ಊರಿಗೆ ಹೊಗಿದ್ದರು. ಆಗ ಅವರ ಮಗಳು ಮನೆಯಿಂದ ಹೊರಗೆ ಹೋಗಿದ್ದನ್ನೇ ನೆಪ ಮಾಡಿಕೊಂಡ ಬಾಲಕಿಯ ಅತ್ತೆ ವಿಜಯ, ಸಿಟ್ಟಿಗೆದ್ದು ಕಾದ ಎಣ್ಣೆಯ ಸೌಟಿನಿಂದ ಬಾಲಕಿಯ ಮೈ, ಮುಖದ ಮೇಲೆ ಬರೆ ಹಾಕಿದ್ದಾಳೆ ಎನ್ನಲಾಗಿದೆ. ಬಾಲಕಿಗೆ ಸುಟ್ಟ ಗಾಯಗಳಾಗಿವೆ. ಈ ಹಿನ್ನಲೆ ಮಾತನಾಡಿರುವ ಬಾಲಕಿಯ ತಂದೆ, ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.
ಸದ್ಯ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿ, ಬಾಲಕಿಯನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.