ಹಾಸನ :ಜಿಲ್ಲೆಯ ಚನ್ನರಾಯಪಟ್ಟಣ-ಮೈಸೂರು ರಸ್ತೆಯ ಹೊರವಲಯದಲ್ಲಿ ನಿರಾಶ್ರಿತರಿಗೆ ಆಶ್ರಮ ನೆರಳಾಗಿದೆ. ಮಾತೃಭೂಮಿ ಎಂಬ ವೃದ್ಧಾಶ್ರಮ ಹನ್ನೆರಡು ವರ್ಷಗಳ ಹಿಂದೆ ಸ್ಥಾಪನೆ ಮಾಡಲಾಯಿತು. ಈ ವೃದ್ಧಾಶ್ರಮದ ಸಂಸ್ಥಾಪಕಿ ವಿಜಯ ನಾಗಣ್ಣ. ವಿಜಯ ಮತ್ತು ನಾಗಣ್ಣ ದಂಪತಿ ಈ ಆಶ್ರಮವನ್ನ ನೋಡಿಕೊಳ್ಳುತ್ತಿದ್ದಾರೆ.
ನಾಗಣ್ಣ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ವಿಜಯ ವೃದ್ಧಾಶ್ರಮವನ್ನು ನೋಡಿಕೊಳ್ಳುತ್ತಿದ್ದಾರೆ. ರಜೆ ದಿನಗಳಲ್ಲಿ ನಾಗಣ್ಣನು ಸಹ ಆಶ್ರಮದಲ್ಲಿ ಕೆಲಸ ಮಾಡುತ್ತಾರೆ. ಅವರ ಮಗ ಮತ್ತು ಸೊಸೆಯ ಸಹಕಾರವೂ ಈ ಆಶ್ರಮಕ್ಕೆ ಇದೆ. ಒಬ್ಬ ಸದಸ್ಯನಿಂದ ಪ್ರಾರಂಭವಾದ ಆಶ್ರಮ ಇವತ್ತು 70ಕ್ಕೂ ಅಧಿಕ ನಿರಾಶ್ರಿತರಿಗೆ ಸೂರಾಗಿದೆ.
ಇಲ್ಲಿ ಬರುವ ನಿರಾಶ್ರಿತರಿಗೆ ಯಾವುದೇ ಶುಲ್ಕವಿಲ್ಲ. ಊಟ, ತಿಂಡಿ, ವಸತಿ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ಈ ಆಶ್ರಮವೇ ನೋಡಿಕೊಳ್ಳುತ್ತದೆ. ಅಲ್ಲದೆ ಕೆಲವು ಅಂಗವಿಕಲ ಸದಸ್ಯರುಗಳ ದೈನಂದಿನ ನಿತ್ಯಕರ್ಮಗಳನ್ನು ಕೂಡ ಆಶ್ರಮದ ಸದಸ್ಯರೇ ಮಾಡುತ್ತಾರೆ. ಹನ್ನೆರಡು ವರ್ಷಗಳ ಹಿಂದೆ ಪ್ರಾರಂಭವಾಗಿರೋ ಈ ವೃದ್ಧಾಶ್ರಮದಲ್ಲಿ ಊಟ, ವಸತಿ ಮತ್ತು ಬಟ್ಟೆ ನೀಡುವ ಜೊತೆಗೆ ಪ್ರವೇಶವೂ ಉಚಿತ.