ಕರ್ನಾಟಕ

karnataka

ETV Bharat / state

ಹಾಸನ ಜಿಲ್ಲಾಡಳಿತ ವತಿಯಿಂದ ಮಂಗನ ಕಾಯಿಲೆ ಅಭಿಯಾನ - Hasan latest Campaign

ಹಾಸನ ಜಿಲ್ಲಾ ಪಂಚಾಯತ್​ ಮತ್ತು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವತಿಯಿಂದ ಮಂಗನ ಕಾಯಿಲೆ ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಮಂಗನ ಖಾಯಿಲೆ ಅಭಿಯಾನ

By

Published : Nov 9, 2019, 6:03 AM IST

ಹಾಸನ :ಹಾಸನ ಜಿಲ್ಲಾ ಪಂಚಾಯತ್​ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವತಿಯಿಂದ ಮಂಗನ ಕಾಯಿಲೆ ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಮಂಗನ ಖಾಯಿಲೆ ಮುಂಜಾಗ್ರತೆ ಬಗ್ಗೆ ತಿಳಿಸಿದ ಆರೋಗ್ಯಾಧಿಕಾರಿ ವಿಜಯ್

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ವಿಜಯ್, ತಾಲೂಕಿನ ಮೂರು ಗ್ರಾಮಪಂಚಾಯಿತಿಯಲ್ಲಿ ಮಂಗನ ಕಾಯಿಲೆಯ ಲಸಿಕೆ ಹಾಕಿದ್ದೇವೆ. ಇದರಲ್ಲಿ ಚೀಕನಹಳ್ಳಿ, ಹುನುಗನಹಳ್ಳಿ ಮತ್ತು ತೊಳಲು ಗ್ರಾಮಪಂಚಾಯಿತಿ, ಈ ವರ್ಷ ಕುಶಾವರ, ಮಲಸಾವರ ಗ್ರಾಮ ಪಂಚಾಯಿತಿ ಕೂಡ ಸೇರಿಸಿದ್ದೇವೆ, ಒಟ್ಟು ಮೂವತ್ತೆರಡು ಗ್ರಾಮ, 8022 ಜನರಿಗೆ ಲಸಿಕೆ ಹಾಕಿ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ನಟೇಶ್, ಆಹಾರ ಸುರಕ್ಷತಾ ಅಧಿಕಾರಿ ನವೀನ್, ಹಿರಿಯ ಆರೋಗ್ಯ ಅಧಿಕಾರಿ ಕೃಷ್ಣಪ್ಪ, ಶಿಕ್ಷಣ ಇಲಾಖೆ ಅಧಿಕಾರಿ ಜಯಣ್ಣ ಉಪಸ್ಥಿತರಿದ್ದರು.

ABOUT THE AUTHOR

...view details