ಕರ್ನಾಟಕ

karnataka

ETV Bharat / state

ಬೈಕ್ ಡಿಕ್ಕಿಯಲ್ಲಿಟ್ಟಿದ್ದ ಹಣ ದೋಚಿದ ಖದೀಮರು: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ - ಬೈಕ್ ಡಿಕ್ಕಿಯಲ್ಲಿಟ್ಟಿದ್ದ ಹಣ ಕಳ್ಳತನ

ಬೈಕ್ ಡಿಕ್ಕಿಯಲ್ಲಿಟ್ಟಿದ್ದ ಹಣವನ್ನು ಸದ್ದಿಲ್ಲದಂತೆ ದೋಚಿರುವ ಘಟನೆ ಹಾಸನದಲ್ಲಿ ನಡೆದಿದೆ.

Money theft on a bike
ಬೈಕ್ ಡಿಕ್ಕಿಯಲ್ಲಿಟ್ಟಿದ್ದ ಹಣ ದೋಚಿದ ಖದೀಮರು

By

Published : Dec 2, 2019, 3:15 PM IST

ಹಾಸನ: ಬೈಕ್ ಡಿಕ್ಕಿಯಲ್ಲಿಟ್ಟಿದ್ದ ಹಣ ಸದ್ದಿಲ್ಲದಂತೆ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.

ಹಣ ದೋಚಿದ ಖದೀಮರು

ದಿನೇಶ್ ಎಂಬುವವರು ಹಣ ಕಳೆದು ಕೊಂಡವರು. ನಗರದ ಸಂಪಿಗೆ ರಸ್ತೆಯ ಐಡಿಬಿಐ ಬ್ಯಾಂಕ್​ಗೆ ಮದ್ಯಾಹ್ನ 1: 45 ರ ಸುಮಾರಿಗೆ ಹೋಗಿದ್ದ ಅವರು ತನ್ನ ಖಾತೆಯಿಂದ 3 ಲಕ್ಷ ಹಣ ಡ್ರಾ ಮಾಡಿದ್ದು, ಹೊರಗೆ ನಿಲ್ಲಿಸಿದ್ದ ಬೈಕ್ ಬಳಿ ಬಂದು ಬೈಕ್​ನ ಡಿಕ್ಕಿಯಲ್ಲಿಟ್ಟಿದ್ದಾರೆ. ಬಳಿಕ ಹೆಲ್ಮೆಟ್ ತರಲು ಬ್ಯಾಂಕ್​ ಒಳಗೆ ಹೋಗಿ ಬರುವಷ್ಟರಲ್ಲಿ ಖದೀಮರು ಹಣವನ್ನು ದೋಚಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

...view details