ಹಾಸನ :ನೀವು ಮಾಡಿದ ವಿಡಿಯೋ ಕಾನ್ಪರೆನ್ಸ್ ಪೂರ್ತಿ ವೇಸ್ಟ್, ನೀವು ಜಿಲ್ಲಾಧಿಕಾರಿಗಳಿಗೆ ಅಗೌರವ ತೋರಿಸಿದ್ದೀರಿ ಎಂದು ಪ್ರಧಾನಿ ಮೋದಿ ವಿರುದ್ಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಾಗ್ದಾಳಿ.. ನಗರದಲ್ಲಿ ಮಾತನಾಡಿದ ಅವರು, ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ, ಜಿಲ್ಲಾಧಿಕಾರಿಗಳನ್ನು ಕೂರಿಸಿಕೊಂಡು ಅವಮಾನ ಮಾಡಿದ್ದೀರಿ. ಪ್ರಧಾನಿ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಬೇಕಿತ್ತು.
ಪ್ರಧಾನಿ ಸಭೆ ಮಾಡಿ ಈ ರಾಜ್ಯದ ಬಗ್ಗೆ ಏನು ತಿಳಿದುಕೊಂಡ್ರು, ನೀವೇ ಮಾತನಾಡಿ ಕೊನೆಗೆ ಜೈ ಜವಾನ್ ಎಂದು ಹೋಗಿಬಿಟ್ಟಿರಲ್ಲ. ಇದು ಜಿಲ್ಲಾಧಿಕಾರಿಗಳಿಗೆ ಅಗೌರವ ತೋರಿದಂತೆ ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಮೂರು ದಿನ ಓಪನ್ ಮಾಡಿ 4 ದಿನ ಲಾಕ್ಡೌನ್ ಮಾಡಿದ್ರೆ ಕೊರೊನಾ ಹೋಗಲ್ಲ. 1 ತಿಂಗಳು ಸಂಪೂರ್ಣ ಲಾಕ್ಡೌನ್ ಮಾಡಿ. ಎರಡು ತಿಂಗಳು ತೆಗೆದುಕೊಂಡು ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
₹20 ಸಾವಿರ ರೈತರು ಅಂತಾರೆ. ಹಾಗಾದ್ರೆ, ಅವರನ್ನು ಗುರುತಿಸಿರೋರು ಯಾರು, ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ. ಇದು ಟೆಂಪ್ರವರಿ ಪ್ಯಾಕೇಜ್. ಒಬ್ಬರಿಗೆ ತಿಂಗಳಿಗೆ ಕನಿಷ್ಟ ₹5 ಸಾವಿರದಂತೆ ಪ್ಯಾಕೇಜ್ ಕೊಡಬೇಕಿತ್ತು. ಸ್ವಲ್ಪ ಮಂತ್ರಿಗಳು ಲೂಟಿ ಮಾಡೋದು ನಿಲ್ಲಿಸಬೇಕಿತ್ತು ಎಂದು ಟೀಕಿಸಿದ್ದಾರೆ.
ಓದಿ:ಮಳೆಯಿಂದ ಚಾಮರಾಜನಗರ ಅರಣ್ಯಗಳಲ್ಲಿ ಜೀವಕಳೆ: ಹಸಿರ ಸಿರಿ ಕಾಣಲು ಮಹಾಮಾರಿ ಅಡ್ಡಿ!