ಹಾಸನ/ಸಕಲೇಶಪುರ:ಶ್ರದ್ಧಾ ಭಕ್ತಿಗಳು ಮಾಯವಾಗುತ್ತಿರುವ ಈ ಸಂದರ್ಭದಲ್ಲಿ ಭಜರಂಗದಳ ಕಾರ್ಯಕರ್ತರು ದತ್ತಮಾಲೆ ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ವಿಧಾನ ಪರಿಷತ್ ಸದ್ಯಸ್ಯೆ ತಾರಾ ಹೇಳಿದರು.
ದತ್ತಮಾಲೆ ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆ: ತಾರಾ - ಭಜರಂಗದಳ ಕಾರ್ಯಕರ್ತರು
ದತ್ತಮಾಲೆ ಅಂಗವಾಗಿ ಸಕಲೇಶಪುರ ಪಟ್ಟಣದ ಹೊಳೆಮಲ್ಲೇಶ್ವರ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯೆ ತಾರಾ ಭೇಟಿ ನೀಡಿದರು.
MLC Tara visited the temple in hasan
ದತ್ತಮಾಲೆ ಅಂಗವಾಗಿ ಸಕಲೇಶಪುರ ಪಟ್ಟಣದ ಹೊಳೆಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸಕಲೇಶಪುರದಿಂದ ಮಹಿಳೆಯರು ಸೇರಿದಂತೆ 3000ಕ್ಕೂ ಹೆಚ್ಚು ಮಂದಿ ದತ್ತಪೀಠಕ್ಕೆ ತೆರಳುತ್ತಿರುವುದು ಸಂತೋಷದ ವಿಷಯ ಎಂದರು.
ಉಪಚುನಾವಣೆಯಲ್ಲಿ ಬಿಜೆಪಿಗೆ 15 ಸ್ಥಾನ ಬಂದಿದ್ದು ಒಳ್ಳೆಯ ಬೆಳವಣಿಗೆ. ಸ್ಥಿರ ಹಾಗೂ ಅಭಿವೃದ್ದಿ ಪರ ಸರ್ಕಾರಕ್ಕಾಗಿ ಜನ ಬಿಜೆಪಿಗೆ ಮತದಾನ ಮಾಡಿದ್ದಾರೆ ಎಂದರು.