ಕರ್ನಾಟಕ

karnataka

ETV Bharat / state

ರೈತರ ಪರ ಮಾತನಾಡದೇ ಕಾರ್ಖಾನೆ ಪರ ಮಾತನಾಡುವಾಗ ಅನುಮಾನವಾಗುತ್ತದೆ: ಗೋಪಾಲಸ್ವಾಮಿ - ಹಾಸನ

ಶಾಸಕರು ರೈತರ ಪರವಾಗಿ ಮಾತನಾಡದೇ ಕಾರ್ಖಾನೆ ಪರವಾಗಿ ಮಾತನಾಡುವ ಮೂಲಕ ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಂ.ಎ ಗೋಪಾಲಸ್ವಾಮಿ ಆರೋಪಿಸಿದ್ದಾರೆ.

Mlc Gopalaswamy
Mlc Gopalasw Mlc Gopalaswamyamy

By

Published : Oct 1, 2020, 11:06 PM IST

ಹಾಸನ: ಚನ್ನರಾಯಪಟ್ಟಣ - ಶ್ರವಣಬೆಳಗೊಳ ಶಾಸಕರು ಹೇಮಾವತಿ ಸಕ್ಕರೆ ಕಾರ್ಖಾನೆಯ ಪಾಲುದಾರರೇ ಅಥವಾ ರೈತರ ಪರ ಹೋರಾಟ ಮಾಡುವ ಪ್ರತಿನಿಧಿಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಂ.ಎ ಗೋಪಾಲಸ್ವಾಮಿ ಆಗ್ರಹಿಸಿದ್ದಾರೆ.

ಶ್ರವಣಬೆಳಗೊಳ ಶಾಸಕರ ವಿರುದ್ದ ಕಿಡಿಕಾರಿದ ಗೋಪಾಲಸ್ವಾಮಿ

ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಯನ್ನು ಆರಂಭಿಸಬೇಕು ಎಂದು ಈಗಾಗಲೇ ನಾವು ದೊಡ್ಡಮಟ್ಟದ ಪ್ರತಿಭಟನೆ ಮಾಡಿದ್ದೇವೆ. ರೈತರು ಬೆಳೆದಿರುವ ಕಬ್ಬು ಈಗಾಗಲೇ ಕಟಾವಿಗೆ ಬಂದಿದ್ದು, ಕೂಡಲೇ ಕಾರ್ಖಾನೆಯನ್ನು ಪ್ರಾರಂಭಿಸಿ ಅಗ್ನಿ ಉದ್ದೀಪನ ಮಾಡುವ ಮೂಲಕ ರೈತರ ಕಬ್ಬನ್ನು ಅರಿಯಬೇಕು ಎಂದು ನಾವುಗಳು ಒತ್ತಾಯ ಮಾಡುತ್ತಿದ್ದರೆ, ಶಾಸಕರು ರೈತರ ಪರವಾಗಿ ಮಾತನಾಡದೇ ಕಾರ್ಮಿಕರ ಪರವಾಗಿ ಮಾತನಾಡುವ ಮೂಲಕ ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರು ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್ ಬಾಲಕೃಷ್ಣಗೆ ಪಾಲುಗಾರಿಕೆ ನೀಡಿದ್ದಾರೆ. ಹಾಗಾಗಿ ರೈತರ ಪರ ಧ್ವನಿ ಎತ್ತದೇ ಕಾರ್ಖಾನೆಯ ಪರವಾಗಿ ಪ್ರತಿಭಟನೆಯಲ್ಲಿ ಮಾತನಾಡುವುದನ್ನು ನೋಡಿದರೆ ಮತ್ತಷ್ಟು ಅನುಮಾನ ಕಾಡುತ್ತಿದ್ದು ಇದನ್ನ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಖಾನೆಯ ಸಮಸ್ಯೆಗಳ ಬಗ್ಗೆ ವಿವರಗಳನ್ನು ನೀಡಲು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ, ಅಥವಾ ಕಾರ್ಖಾನೆಗೆ ಸಂಬಂಧಪಟ್ಟ ಅಧಿಕಾರಿಗಳು ವಿವರಣೆ ನೀಡಬೇಕು. ಆದರೆ, ಮಾನ್ಯ ಶಾಸಕರೇ ಕಾರ್ಖಾನೆ ಪರವಾಗಿ ಮಾತನಾಡುವ ಮೂಲಕ ರೈತರುಗಳ ಸಂಕಷ್ಟಕ್ಕೆ ಸ್ಪಂದಿಸದೇ ಇರುವುದು ನಿಜಕ್ಕೂ ಬೇಸರದ ಸಂಗತಿ. ಕಬ್ಬು ಅರೆಯುವಿಕೆಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮತ್ತೆ ರಾಜ್ಯ ಸರ್ಕಾರಕ್ಕೂ ಪತ್ರ ಬರೆದಿದ್ದು ಮುಂದಿನ ದಿನಗಳಲ್ಲಿ ಕಾರ್ಖಾನೆಯ ಪ್ರಾರಂಭವಾಗದಿದ್ದರೆ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ABOUT THE AUTHOR

...view details