ಹಾಸನ: ಹೆಚ್.ಡಿ.ರೇವಣ್ಣ ಅವರು ಹಾಸನದಲ್ಲಿ ಬುದ್ಧಿವಂತ ಪಿಎ ಇಟ್ಟುಕೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಿಯುಸಿಯಲ್ಲಿ ಮೂರು ಬಾರಿ ಫೇಲ್ ಆಗಿ ಆ ನಂತರ ಡಿಗ್ರಿ ಮಾಡಿಕೊಂಡಿರುವ ದಡ್ಡ. ರೇವಣ್ಣ ಅವರು ತಮ್ಮ ಪುತ್ರನ ಚುನಾವಣೆಯಲ್ಲಿ ಯಾರ್ಯಾರ ಮನೆ ಬಾಗಿಲಿಗೆ ಬಂದು ಕೈ-ಕಾಲು ಹಿಡಿದಿದ್ದರು ಎಂದು ಮೊದಲು ನೆನಪಿಸಿಕೊಳ್ಳಲಿ. ರೇವಣ್ಣ ಅವರನ್ನು ನಾನು ಎಂದೂ ಟೀಕೆ ಮಾಡಿರಲಿಲ್ಲ. ಅವರಿಗೆ ಸಭೆಗೆ ಬರುವಂತೆ ಮನವಿ ಮಾಡಿದ್ದೆ. ಆದರೆ ಈಗ ಅವರು ನನಗೆ ಬುದ್ಧಿ ಇಲ್ಲ. ಕೇಸು ದಾಖಲಿಸುತ್ತೇನೆ ಎಂದು ಹೆದರಿಸುತ್ತಿದ್ದಾರೆ. ಅವರು ಮೊದಲು ಮಾಹಿತಿ ಪಡೆದು ಮಾತನಾಡಲಿ ಎಂದರು.
ಹೆಚ್.ಡಿ.ರೇವಣ್ಣ ಬುದ್ಧಿವಂತ ಪಿಎ ಇಟ್ಟುಕೊಳ್ಳಲಿ: ಗೋಪಾಲಸ್ವಾಮಿ - MLC Gopalaswamy Latest News
ಜೆಡಿಎಸ್ ಜಿಪಂ ಸದಸ್ಯರನ್ನು ಸಭೆಗೆ ಕರೆ ತರುವಂತೆ ರೇವಣ್ಣ ಅವರಿಗೆ ತಾವು ಮಾಡಿದ್ದ ಮನವಿಗೆ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿರುವ ಮಾಜಿ ಸಚಿವ ರೇವಣ್ಣಗೆ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ತಿರುಗೇಟು ನೀಡಿದರು.
ಜಿಲ್ಲಾ ಪಂಚಾಯತ್ ಸಭೆಗೆ ಜೆಡಿಎಸ್ ಸದಸ್ಯರ ಗೈರು ಹಾಜರಾತಿಯಿಂದ ಜಿಲ್ಲೆಗೆ ಬಂದಿರುವ 15ನೇ ಹಣಕಾಸು ಯೋಜನೆಯ 112 ಕೋಟಿ ಅನುದಾನ ವಾಪಸ್ ಹೋಗುವ ಹಿನ್ನೆಲೆಯಲ್ಲಿ
ಜೆಡಿಎಸ್ ಜಿ.ಪಂ ಸದಸ್ಯರನ್ನು ಸಭೆಗೆ ಕರೆ ತರುವಂತೆ ರೇವಣ್ಣ ಅವರಿಗೆ ತಾವು ಮಾಡಿದ್ದ ಮನವಿಗೆ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿರುವ ಮಾಜಿ ಸಚಿವ ರೇವಣ್ಣಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಬಾರದು. ಪಕ್ಷದ ಸೂಚನೆಯಂತೆ ಹಾಸನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮನವೊಲಿಸಿ ಜೆಡಿಎಸ್ ಬೆಂಬಲಿಸಿದ ತಪ್ಪಿಗಾಗಿ ತಾವು ಜಿಲ್ಲೆಯ ಕೈ ಕಾರ್ಯಕರ್ತರ ಕೈ ಮುಗಿದು ಕ್ಷಮೆ ಕೋರುತ್ತೇವೆ. ಕೋವಿಡ್-19 ಹೆಸರಿನಲ್ಲಿ ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ಗಳಿಗೆ ನಡೆಯಬೇಕಿದ್ದ ಚುನಾವಣೆ ಮುಂದೂಡಲು ಮುಂದಾಗಿರುವುದಕ್ಕೆ ತಾವು ಸೇರಿದಂತೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.