ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯಗೆ 'ಟಗರು' ನೀಡಿ ಗೌರವಿಸಿದ ಎಂಎಲ್​ಸಿ ಗೋಪಾಲಸ್ವಾಮಿ - ಸಿದ್ದರಾಮಯ್ಯಗೆ ಟಗರು ನೀಡಿ ಗೌರವಿಸಿದ ಎಂಎಲ್​ಸಿ ಗೋಪಾಲಸ್ವಾಮಿ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳದೇ ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಸ್ಪಷ್ಟಪಡಿಸಿದರು.

mlc-gopalaswamy-honored-siddaramaiah-with-sheep
ಸಿದ್ದರಾಮಯ್ಯಗೆ 'ಟಗರು' ನೀಡಿ ಗೌರವಿಸಿದ ಎಂಎಲ್​ಸಿ ಗೋಪಾಲಸ್ವಾಮಿ

By

Published : Apr 4, 2021, 3:47 AM IST

Updated : Apr 4, 2021, 6:42 AM IST

ಹಾಸನ:ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿಗೆ ಶನಿವಾರ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜೆಸಿಬಿ ಮೂಲಕ ಬೃಹತ್ ಸೇಬಿನ ಹಾರ ಹಾಕುವ ಭರ್ಜರಿ ಸ್ವಾಗತ ಕೋರಲಾಯಿತು. ಬಳಿಕ ವೇದಿಕೆಯಲ್ಲಿ ಸಿದ್ದರಾಮಯ್ಯ ಅವರಿಗೆ ವಿಧಾನಪರಿಷತ್ ಸದಸ್ಯರ ಗೋಪಾಲಸ್ವಾಮಿಯವರು ಟಗರು ನೀಡಿ ವಿಭಿನ್ನವಾಗಿ ಗೌರವಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಹಾಸನ ಜಿಲ್ಲೆಗೆ ನನ್ನ ಸರ್ಕಾರದಲ್ಲಿ ಸುಮಾರು 176 ಕೋಟಿ ಕಾಮಗಾರಿ ನೀಡಲಾಗಿದ್ದು, ಇದರಲ್ಲಿ ಸುಮಾರು 90 ಯೋಜನೆಗಳು ಪೂರ್ಣಗೊಂಡಿವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳದೇ ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯಗೆ 'ಟಗರು' ನೀಡಿ ಗೌರವಿಸಿದ ಎಂಎಲ್​ಸಿ ಗೋಪಾಲಸ್ವಾಮಿ

ಈ ಹಿಂದೆ ವಿಧಾನಪರಿಷತ್ ಸದಸ್ಯರ ಗೋಪಾಲಸ್ವಾಮಿ ಸ್ವಗ್ರಾಮ ನುಗ್ಗೆಹಳ್ಳಿಯ ನೀರಾವರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಸಿದ್ದರಾಮಯ್ಯ ಕೆರೆಗೆ ನೀರು ತುಂಬಿಸಿದ್ದು ಯಾರು ಎಂಬ ಪ್ರಶ್ನೆಗೆ ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ಎಂಎಲ್​ಸಿ ಗೋಪಾಲಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಈ ವಿಚಾರದ ಬಗ್ಗೆ ಎಂಎಲ್​ಸಿ ಗೋಪಾಲಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನುಗ್ಗೆಹಳ್ಳಿಗೆ ಕರೆಯಿಸಿ ಜನತೆಯ ಮುಂದೆ ಸ್ಪಷ್ಟಪಡಿಸಿದಂತೆ ಕಂಡುಬಂತು.

Last Updated : Apr 4, 2021, 6:42 AM IST

For All Latest Updates

ABOUT THE AUTHOR

...view details