ಹಾಸನ :ಎರಡನೇ ಅಲೆಯಲ್ಲಿ ಹೋಂ ಐಸೋಲೇಷನ್ ಮಾಡದೇ ಸೋಂಕು ಹರಡಿಸಿ ಬಿಟ್ರಿ. ಆದ್ರೆ, ಮೂರನೇ ಅಲೆಯಲ್ಲಿ ಆ ರೀತಿ ಮಾಡಿ ಮಕ್ಕಳ ಜೀವ ತೆಗೆಯುವುದು ಬೇಡ. ಬದಲಿಗೆ ಕಡ್ಡಾಯವಾಗಿ ಕಾನೂನಾನ್ಮಕವಾಗಿ ಮಕ್ಕಳನ್ನು ಮುಂದಿನ ದಿನದಲ್ಲಿ ಹೋಂ ಐಸೋಲೇಷನ್ ಮಾಡುವಂತೆ ಆದೇಶ ಹೊರಡಿಸಿ ಎಂದು ಸರ್ಕಾರಕ್ಕೆ ಶಾಸಕ ಶಿವಲಿಂಗೇಗೌಡ ಒತ್ತಾಯಿಸಿದ್ರು.
ಹಾಸನ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಾ, ಈಗಾಗಲೇ ಮುಂದೆ 3ನೇ ಅಲೆ ಬರುತ್ತದೆಂದು ಹೇಳಲಾಗುತ್ತಿದೆ. ಅದಕ್ಕೆ ಈಗಿಂದಲೇ ಸಿದ್ಧತೆ ಮಾಡಿಕೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಗೆ ಮನವಿ ಮಾಡಿದ್ರು.
ಜಿಲ್ಲೆಯಲ್ಲಿ 2ನೇ ಅಲೆಯಲ್ಲಿ ಮಧ್ಯಮ ವರ್ಗದವರು ಇದ್ದ ಆಸ್ತಿ-ಪಾಸ್ತಿ ಮಾರಿ ಆರ್ಥಿಕ ದುಸ್ಥಿತಿಗೆ ತಲುಪಿದ್ದಾರೆ. ಅಂತಹ ಪರಿಸ್ಥಿತಿ 3ನೇ ಅಲೆಯಲ್ಲಿ ಬರುವುದು ಬೇಡ. ಮಕ್ಕಳಿಗೆ ಹೋಂ ಐಸೋಲೇಷನ್ ಮಾಡುವುದಾದರೇ ಅವರ ಜೊತೆ ಪೋಷಕರೊಬ್ಬರು ಇರಬೇಕು.