ಕರ್ನಾಟಕ

karnataka

ETV Bharat / state

ನಾನು ಪಕ್ಷ ಬದಲಾವಣೆ ಮಾಡುತ್ತೇನೆ ಎಂದವರಿಗೆ ತಲೆಕೆಟ್ಟಿದೆ: ಶಾಸಕ ಶಿವಲಿಂಗೇಗೌಡ - ಹಾಸನದ ಹೊರವಲಯದ ಕೃಷ್ಣ ನಗರ.

ಈ ಹಿಂದೆ ಕೆರೆಗಳಿಗೆ ನೀರು ಹರಿಸಿದ್ದ ಸಮಯದಲ್ಲಿ ಸಿಎಂ ಬೊಮ್ಮಾಯಿ ಅವರ ಕೈಗೆ ಚಿನ್ನದುಂಗುರ ಹಾಕಿದ್ದೆ ಹಾಗಂತ ಬಿಜೆಪಿ ಸೇರುತ್ತೇವೆ ಅಂತನಾ? ಎಂದು ಶಾಸಕ ಶಿವಲಿಂಗೇಗೌಡ ಪಕ್ಷ ಬಿಡುತ್ತಾರೆ ಎಂಬ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

MLA Shivalingegowda
ಶಾಸಕ ಶಿವಲಿಂಗೇಗೌಡ

By

Published : Sep 26, 2021, 5:28 PM IST

ಹಾಸನ: ನಾನು ಜೆಡಿಎಸ್ ಬಿಡುತ್ತೇನೆ ಎನ್ನುವುದೆಲ್ಲಾ ಬರಿ ಊಹಾಪೋಹ. ಪಕ್ಷ ಬದಲಾಯಿಸುತ್ತೇನೆ ಎಂದವರಿಗೆ ತಲೆಕೆಟ್ಟಿದೆ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು.

ಹಾಸನದ ಹೊರವಲಯದ ಕೃಷ್ಣ ನಗರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಒಕ್ಕಲಿಗರ ಭವನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯೆ

ಸಿದ್ದರಾಮಯ್ಯರ ಸರ್ಕಾರವಿದ್ದಾಗ ಆದ ಕೆಲಸದ ಬಗ್ಗೆ ಸದನದಲ್ಲಿ ಹೇಳಿದ್ದೇನೆ. ಹಾಗೆಂದ ಮಾತ್ರಕ್ಕೆ ಪಕ್ಷ ಬಿಡುತ್ತೇನೆ ಎಂದರ್ಥವಲ್ಲ. ಕೊನೆಯವರೆಗೂ ಜೆಡಿಎಸ್​ನಲ್ಲೇ ಇರುತ್ತೇನೆ. ಜೆಡಿಎಸ್​ನಿಂದ ಗೆದ್ದು ಬೇರೊಂದು ಪಕ್ಷಕ್ಕೆ ಹೋಗುತ್ತೇನಾ?

ಈ ಹಿಂದೆ ಕೆರೆಗಳಿಗೆ ನೀರು ಹರಿಸಿದ್ದ ಸಮಯದಲ್ಲಿ ಸಿಎಂ ಬೊಮ್ಮಾಯಿ ಅವರ ಕೈಗೆ ಚಿನ್ನದುಂಗುರ ಹಾಕಿದ್ದೆ ಹಾಗಂತ ಬಿಜೆಪಿ ಸೇರುತ್ತೇವೆ ಅಂತನಾ? ಯಾರು ಕೆಲಸ ಮಾಡಿಕೊಡುತ್ತಾರೋ ಅವರಿಗೆ ಕೃತಜ್ಞತೆ ಅರ್ಪಿಸಬೇಕು. ಇದರಲ್ಲಿ ಬೇರೆ ರಾಜಕೀಯ ಇಲ್ಲ ಎಂದರು.

ಯಾರು, ಯಾರಿಗೆ ಯಾವ ಮೂಲದಿಂದ ವಿಷಯ ತಿಳಿಯುತ್ತಿದೆ ಅನ್ನೋದು ನನಗೆ ಗೊತ್ತಿಲ್ಲ. ಯಡಿಯೂರಪ್ಪ ಅವರ ಮೂಲದ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ಶಿವಲಿಂಗೇಗೌಡ ಹೇಳಿದರು.

ಇದನ್ನೂ ಓದಿ:ಹಾಸನ : ಚಲಿಸುತ್ತಿದ್ದ ವಾಹನಕ್ಕೆ ಆಕಸ್ಮಿಕ ಬೆಂಕಿ, ಸುಟ್ಟು ಕರಕಲಾದ ಬೈಕ್

ABOUT THE AUTHOR

...view details