ಹಾಸನ: ಕೊರೊನಾ ಕಡಿಮೆ ಆಗುವವರೆಗೂ ಶಾಲೆಗಳನ್ನು ತೆರೆಯಬಾರದು. ಹಾಗೂ ಒಂದು ವೇಳೆ ತೆರೆದರೆ ತಲೆಕೆಟ್ಟು ತೆರೆಯಬೇಕಷ್ಟೇ ಎಂದು ಶಾಸಕ ಶಿವಲಿಂಗೇ ಗೌಡ ಹೇಳಿದರು.
ಕೊರೊನಾ ಕಡಿಮೆ ಆಗುವವರೆಗೂ ಶಾಲೆ ತೆರೆಯಬಾರದು: ಶಾಸಕ ಶಿವಲಿಂಗೇ ಗೌಡ
ಶಿಕ್ಷಕರದ್ದೂ ಕೂಡ ಗೋಳಿನ ಕಥೆ ಆಗಿದೆ. ಅವರನ್ನೂ ಹಾಳು ಮಾಡುವ ಕೆಲಸ ಸರ್ಕಾರದಿಂದ ಆಗಬಾರದು. ಕೊರೊನಾವನ್ನು ಒಂದು ವರ್ಷ ಏನು ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ಆನ್‌ಲೈನ್‌ನಲ್ಲಿಯೇ ಶಿಕ್ಷಣ ಕೊಡಿ ಎಂದು ಅವರು ಸಲಹೆ ನೀಡಿದರು.
ಶಾಸಕ ಶಿವಲಿಂಗೇಗೌಡ ಮಾಧ್ಯಮಗೋಷ್ಠಿ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಕೊರೊನಾ ಕಂಟ್ರೋಲ್‌ಗೆ ಬರುವವರೆಗೂ ಶಾಲೆ ತೆರೆಯಬಾರದು. ಹೇಗೋ ಮಕ್ಕಳನ್ನು ಮನೆಯಲ್ಲಿ ಜಾಗೃತವಾಗಿ ಇಟ್ಟುಕೊಂಡಿದ್ದಾರೆ. ಮಕ್ಕಳಿಗೆ ಕೊರೊನಾ ಬಂದರೆ ಕಂಟ್ರೋಲ್ ಮಾಡೋದು ಕಷ್ಟ ಎಂದರು.
ಶಿಕ್ಷಕರದ್ದೂ ಕೂಡ ಗೋಳಿನ ಕಥೆ ಆಗಿದೆ. ಅವರನ್ನೂ ಹಾಳು ಮಾಡುವ ಕೆಲಸ ಸರ್ಕಾರದಿಂದ ಆಗಬಾರದು. ಕೊರೊನಾವನ್ನು ಒಂದು ವರ್ಷ ಏನು ಮಾಡಲು ಸಾಧ್ಯವಿಲ್ಲ. ಶಾಲೆ ತೆರೆಯುವ ಬಗ್ಗೆ ಸರ್ಕಾರ, ಸುರೇಶ್ ಕುಮಾರ್ ಅವರಿಗೆ ಮನವಿ ಮಾಡುತ್ತೇನೆ. ದಯವಿಟ್ಟು ಶಾಲೆ ತೆರೆಯುವುದು ಬೇಡ ಎಂದು ಹೇಳಿದರು.