ಹೊಳೆನರಸೀಪುರ: ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟಾರ್ಪಾಲ್‌ಗಳನ್ನು ವಿತರಣೆ ಮಾಡುವ ವೇಳೆ ಟಾರ್ಪಲ್‌ಗಳ ಗುಣಮಟ್ಟ ಚನ್ನಾಗಿಲ್ಲ ಅಂದಿದಕ್ಕೆ ರೈತರ ವಿರುದ್ಧವೇ ಸಿಡಿಮಿಡಿಗೊಂಡ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೇಕಾದ್ರೆ ತಗೊಳ್ರಿ ಸಾಕಾದ್ರೆ ಬಿಡ್ರಿ ಅಂತಾ ಗದರಿದರು.
ಬೇಕಾದ್ರೆ ತಗೊಳ್ರಿ ಸಾಕಾದ್ರೆ ಬಿಡ್ರಿ : ರೈತರ ವಿರುದ್ಧ ಗರಂ ಆದ ಶಾಸಕ ರೇವಣ್ಣ - ಶಾಸಕ ರೇವಣ್ಣ
ಹೊಳೆನರಸೀಪುರ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟಾರ್ಪಾಲ್‌ಗಳನ್ನು ವಿತರಣೆ ಮಾಡುವ ವೇಳೆ ಟಾರ್ಪಲ್‌ಗಳ ಗುಣಮಟ್ಟ ಚನ್ನಾಗಿಲ್ಲ ಅಂದಿದಕ್ಕೆ ರೈತರ ವಿರುದ್ಧವೇ ಸಿಡಿಮಿಡಿಗೊಂಡ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಬೇಕಾದ್ರೆ ತಗೊಳ್ರಿ ಸಾಕಾದ್ರೆ ಬಿಡ್ರಿ ಅಂತಾ ಗದರಿದರು.
ಹೌದು, ಸದಾ ಒಂದಿಲ್ಲೊಂದು ಯಡವಟ್ಟುಗಳನ್ನು ಮೈಮೇಲೆಳೆದುಕೊಳ್ಳೋ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇಂದು ಸಮಸ್ಯೆ ಹೇಳಿಕೊಳ್ಳಲು ಬಂದ ರೈತರ ವಿರುದ್ಧವೇ ಗರಂ ಆದರಲ್ಲದೇ ಗದರಿಸಿ ರೈತರ ಬಾಯಿ ಮುಚ್ಚಿಸಿದರು. ಶಾಸಕ ಹೆಚ್.ಡಿ.ರೇವಣ್ಣ ತಾಲೂಕಿನ ಹಳೇಕೋಟೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಟಾರ್ಪಲ್‌ಗಳನ್ನು ವಿತರಿಸೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ, ಕಳೆದ ಬಾರಿ ಟಾರ್ಪಲ್ ಪಡೆದಿದ್ದ ಕೆಲವರು ಸಾರ್ ಕಳೆದ ಬಾರಿ ನೀಡಿದ ಟಾರ್ಪಲ್‌ಗಳ ಕ್ವಾಲಿಟಿ ಚೆನ್ನಾಗಿಲ್ಲ. ಮಾರ್ಕೆಟ್‌ನಲ್ಲೇ 900-1000 ರೂ.ಗೆ ಒಳ್ಳೆಯ ಟಾರ್ಪಲ್ ಸಿಕ್ತವೆ ಅಂತ ಪ್ರಶ್ನಿಸಿದರು. ಆದ್ರೆ ಇಷ್ಟಕ್ಕೆ ಸಿಟ್ಟಿಗೆದ್ದ ರೇವಣ್ಣ, ಬೇಕಾದ್ರೆ ತಗೊಳ್ರಿ ಸಾಕಾದ್ರೆ ಬಿಡ್ರಿ ಅಂತಾ ಗದರಿದರು.
ಇದರಿಂದ ತಮ್ಮ ಶಾಸಕರಿಗೆ ಸಮಸ್ಯೆ ಹೇಳಿಕೊಳ್ಳಲು ಬಂದ ರೈತರು ಸುಮ್ಮನಾದರು. ಆದ್ರೂ ತಮ್ಮ ಸಿಟ್ಟು ಕಮ್ಮಿಯಾಗಲಿಲ್ಲ, ಅಧಿಕಾರಿಗಳ ವಿರುದ್ಧವೂ ಶಾಸಕ ರೇವಣ್ಣ ಸಿಡಿದೆದ್ದರು.