ಕರ್ನಾಟಕ

karnataka

ETV Bharat / state

ವಸತಿ ಶಾಲೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಎ ಟಿ ರಾಮಸ್ವಾಮಿ - Mla st ramaswamy news

ಎಲ್ಲಕ್ಕಿಂತ ಮಿಗಿಲಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಜನತೆ ಹಳ್ಳಿಗಳಲ್ಲಿ ಶಾಲೆಗಳನ್ನು‌ ದತ್ತು ಪಡೆದು ಗಿಡ ನೆಟ್ಟು ಪರಿಸರ ಬೆಳೆಸಲು ಮುಂದಾಗಬೇಕು..

Ramaswamy
Ramaswamy

By

Published : Jun 26, 2020, 3:26 PM IST

ಅರಕಲಗೂಡು: ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ 20 ಕೋಟಿ ರೂ. ವೆಚ್ಚದ‌ ಇಂದಿರಾ ಗಾಂಧಿ ವಸತಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಇಂದು ಶಾಸಕ ಎ ಟಿ ರಾಮಸ್ವಾಮಿ ಶಂಕು ಸ್ಥಾಪನೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಕಳೆದ‌ ಎರಡು ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದ ವಸತಿ ಶಾಲೆಗೆ ಮೂಲ ಸೌಕರ್ಯಗಳ ಕೊರತೆ ಇತ್ತು. ವಸತಿ ಶಾಲೆಗಳ ಮಹತ್ವದ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಿ ಕ್ಷೇತ್ರದಲ್ಲಿ ನಾಲ್ಕು ವಸತಿ ಶಾಲೆಗಳಿಗೆ ತಲಾ 20 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ. ಮಕ್ಕಳ ಭವಿಷ್ಯ ಸುಂದರವಾಗಿ ನಿರ್ಮಾಣವಾಗಲು ಗುಣಮಟ್ಟದ ಕಟ್ಟಡಗಳು ತಲೆ ಎತ್ತಬೇಕು, ಎಂಜಿನಿಯರ್‌ ಮತ್ತು‌ ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.

ಕ್ಷೇತ್ರದ ಪ್ರಗತಿಗೆ ಸಹ ಮಹತ್ವ ನೀಡಲಾಗಿದೆ. ರಸ್ತೆಗಳ ಅಭಿವೃದ್ಧಿಗೆ 300 ಕೋಟಿ ರೂ. ನೀರಾವರಿ ಇಲಾಖೆಗೆ ಬರೋಬ್ಬರಿ 2 ಸಾವಿರ ಕೋಟಿ ರೂ. ಅನುದಾನ ಮಂಜೂರು ಮಾಡಿಸಿರುವೆ. ಎಲ್ಲಕ್ಕಿಂತ ಮಿಗಿಲಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಜನತೆ ಹಳ್ಳಿಗಳಲ್ಲಿ ಶಾಲೆಗಳನ್ನು‌ ದತ್ತು ಪಡೆದು ಗಿಡ ನೆಟ್ಟು ಪರಿಸರ ಬೆಳೆಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ವೇಳೆ ತಹಶೀಲ್ದಾರ್ ವೈ ಎಂ ರೇಣುಕುಮಾರ್, ರವಿಕುಮಾರ್, ಗ್ರಾಪಂ ಅಧ್ಯಕ್ಷೆ ಶೋಭಾ ಮಹಾದೇವು, ಉಪಾಧ್ಯಕ್ಷ ಗೋವಿಂದರಾಜು, ಸದಸ್ಯೆ ಸವಿತಾ, ತಾಪಂ ಸದಸ್ಯರಾದ ನಿಂಗೇಗೌಡ, ಇಮ್ರಾನ್, ಕೃಷ್ಣೇಗೌಡ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ರವೀಂದ್ರ, ವಾಯುಪುತ್ರ ಸೇವಾ ಟ್ರಸ್ಟ್‌ ಅಧ್ಯಕ್ಷ ಅಶೋಕ್, ತಾಪಂ ಮಾಜಿ ಅಧ್ಯಕ್ಷ ಸಂತೋಷ್ ಗೌಡ ಮುಂತಾದವರು ಉಪಸ್ಥಿತರಿದ್ದರು.

For All Latest Updates

ABOUT THE AUTHOR

...view details