ಅರಕಲಗೂಡು:ತಾಲೂಕಿನ ವಿಜಾಪುರ ಅರಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡಿಕೆಬೊಮ್ಮನಹಳ್ಳಿ ಏತ ನೀರಾವರಿ ಹಾಗೂ ಅಲ್ಲಾಪಟ್ಟಣ ಏತ ನೀರಾವರಿ ಯೋಜನೆಯ ನಾಲೆಗಳಿಗೆ ನೀರು ಹರಿಸಲು ಶಾಸಕ ಎ.ಟಿ.ರಾಮಸ್ವಾಮಿ ಚಾಲನೆ ನೀಡಿದರು.
ಏತ ನೀರಾವರಿ ಯೋಜನೆ ನಾಲೆಗಳಿಗೆ ನೀರು ಹರಿಸಲು ಚಾಲನೆ - ಶಾಸಕ ಎ.ಟಿ.ರಾಮಸ್ವಾಮಿ
ಅರಕಲಗೂಡಿನ ಅಡಿಕೆಬೊಮ್ಮನಹಳ್ಳಿ ಏತ ನೀರಾವರಿ ಹಾಗೂ ಅಲ್ಲಾಪಟ್ಟಣ ಏತ ನೀರಾವರಿ ಯೋಜನೆ ನಾಲೆಗಳಿಗೆ ನೀರು ಹರಿಸಲು ಶಾಸಕ ಎ.ಟಿ.ರಾಮಸ್ವಾಮಿ ಚಾಲನೆ ನೀಡಿದರು.
ಏತ ನೀರಾವರಿಗಳಿಗೆ ಚಾಲನೆ ನೀಡಿದ ಶಾಸಕ
ಬಳಿಕ ಮಾತನಾಡಿದ ಅವರು, ದುಸ್ಥಿತಿಯಲ್ಲಿದ್ದ ಏತ ನೀರಾವರಿಯ ಯಂತ್ರಗಳ ಉಪಕರಣಗಳನ್ನು ₹90 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸಿ ಕಾಲುವೆಗಳಿಗೆ ನೀರು ಹರಿಸಲು ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವುಗಳನ್ನು ಆಧುನೀಕರಣಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದರು.
ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ ಅಚ್ಚುಕಟ್ಟು ಪ್ರದೇಶ 8,500 ಸಾವಿರ ಎಕರೆ ಭೂ ಪ್ರದೇಶಕ್ಕೆ 89 ಕ್ಯೂಸೆಕ್ ನೀರು ಹರಿಯುವುದು ಹಾಗೂ ಅಲ್ಲಾಪಟ್ಟಣ ಏತ ನೀರಾವರಿ ಪ್ರದೇಶ 1,160 ಎಕರೆ ಭೂ ಪ್ರದೇಶಕ್ಕೆ ನೀರು ಹರಿಸಲಾಗುವುದು ಎಂದು ಹೇಳಿದರು.