ಹಾಸನ : ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವಧಿಯ ವೇಳೆ ಜಿಲ್ಲೆಯಅವರ ಆಪ್ತ ಗುತ್ತಿಗೆದಾರರಿಗೆ ಹಾಗೂ ಬೆಂಬಲಿಗರಿಗೆ ಮಂಜೂರಾಗಿದ್ದ ಕಾಮಗಾರಿಗಳಿಗೆ ಬ್ರೇಕ್ ಹಾಕಲಾಗುವುದು ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.
ರೇವಣ್ಣ ಅಸ್ತು ಎಂದಿದ್ದ ಕಾಮಗಾರಿಗಳು ಬಂದ್ : ಶಾಸಕ ಪ್ರೀತಂಗೌಡ - MLA Preetham gowda
400 ಕೋಟಿ ಪ್ಯಾಕೇಜ್ ತರೋದು ಅಭಿವೃಧಿಯಲ್ಲ, ಜನರಿಗೆ ಬೇಕಿರೋ ಮೂಲಭೂತ ಸೌಲಭ್ಯಗಳನ್ನ ಒದಗಿಸಬೇಕು, ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ ಸಿಗುವಂತಾಗಬೇಕು ಎಂದು ಹೆಚ್ ಡಿ ರೇವಣ್ಣ ವಿರುದ್ಧ ಶಾಸಕ ಪ್ರೀತಂಗೌಡ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜನರಿಗೆ ಅನುಕೂಲವಾಗುವಂತಹ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಿಲ್ಲುವುದಿಲ್ಲ. ಮಳೆ ಬರುತ್ತಿರುವ ಕಾರಣ ಕೆಲವು ಕಾಮಗಾರಿಗಳ ವೇಗ ಕಡಿಮೆ ಆಗಿದೆ. ಆದರೆ, ಮಾಜಿ ಸಚಿವ ರೇವಣ್ಣ ಅವರ ಬೆಂಬಲಿಗರಿಗೆ ಮಂಜೂರಾಗಿರುವ ಕಾಮಗಾರಿಗಳನ್ನು ಮುಂದುವರೆಸಲು ಬಿಡುವುದಿಲ್ಲ ಎಂದರು.
ಕೇವಲ ಕಟ್ಟಡಗಳನ್ನು ಕಟ್ಟಿಸಿ ಗುತ್ತಿಗೆದಾರರಿಗೆ 400 ಕೋಟಿ ರೂ. ಪ್ಯಾಕೇಜ್ ತರುವುದು ಅಭಿವೃದ್ಧಿಯಲ್ಲ. ಜನರಿಗೆ ಬೇಕಾಗಿರುವುದು ಅಗತ್ಯ ಸೌಕರ್ಯಗಳು. ಮೊದಲು ಅವುಗಳು ಸಿಗುವಂತಾಗಬೇಕು. ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳನ್ನು ಸೃಷ್ಟಿಸುವತ್ತ ಬಿಜೆಪಿ ಸರ್ಕಾರ ಆಡಳಿತ ನಡೆಸಲಿದೆ ಎಂದು ಹೇಳಿದರು.