ಹಾಸನ: ಕನ್ನಡ ಬಾವುಟ ಹಾರಿಸುವ ವಿಚಾರ ಸರ್ಕಾರದ ಮಟ್ಟದಾಗಿದ್ದು, ಈ ಬಗ್ಗೆ ನಾನು ಶಾಸಕನಾಗಿ ಅಭಿಪ್ರಾಯ ತಿಳಿಸಲಾಗುವುದಿಲ್ಲ ಎಂದು ಶಾಸಕ ಪ್ರೀತಮ್ ಗೌಡ ಹೇಳಿದ್ದಾರೆ.
ಕನ್ನಡ ಬಾವುಟ ಹಾರಿಸುವ ವಿಚಾರದಲ್ಲಿ ನನ್ನ ಅಭಿಪ್ರಾಯವಿಲ್ಲ: ಶಾಸಕ ಪ್ರೀತಮ್ ಗೌಡ - ಕನ್ನಡ ಹಾಗೂ ನಾಡಧ್ವಜ ಎಂಬುದು ಮನಸ್ಸಿನ ಭಾವನೆಯಲ್ಲಿರಬೇಕೆಂದ ಪ್ರೀತಮ್ ಗೌಡ
ಕನ್ನಡ ಬಾವುಟ ಹಾರಿಸುವ ವಿಚಾರ ಸರ್ಕಾರದ ಮಟ್ಟದಾಗಿದ್ದು, ಈ ಬಗ್ಗೆ ನಾನು ಶಾಸಕನಾಗಿ ಅಭಿಪ್ರಾಯ ತಿಳಿಸಲಾಗುವುದಿಲ್ಲ ಎಂದು ಶಾಸಕ ಪ್ರೀತಮ್ ಗೌಡ ಹೇಳಿದರು.
ಶಾಸಕ ಪ್ರೀತಮ್ ಗೌಡ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಸರ್ಕಾರದಿಂದ ಅಧಿಕೃತವಾಗಿ ಯಾವ ರೀತಿ ಸೂಚನೆ ಬಂದಿದೆಯೋ ಆ ರೀತಿ ಜಿಲ್ಲಾಡಳಿತ ನಡೆದುಕೊಂಡು ಬರುವುದು ಪದ್ಧತಿ ಎಂದರು.
ಕನ್ನಡ ಹಾಗೂ ನಾಡಧ್ವಜ ಎಂಬುದು ಮನಸ್ಸಿನ ಭಾವನೆಯಲ್ಲಿ ಮತ್ತು ನಾವು ಮಾಡುವ ಕೆಲಸದಲ್ಲಿ ಇರಬೇಕು. ಸರ್ಕಾರದ ತೀರ್ಮಾನವನ್ನು ಎಲ್ಲಾ ಶಾಸಕರು ಗೌರವಿಸುತ್ತಾರೆ. ಇತಿಮಿತಿಯಲ್ಲಿ ಕೆಲಸ ನಿರ್ವಹಿಸುವವನು ಪಕ್ಷದ ಶಿಸ್ತುಬದ್ಧ ಶಾಸಕ ಎಂದು ಹೇಳಿದರು.