ಕರ್ನಾಟಕ

karnataka

ETV Bharat / state

ತಾಪಂ ಸಭೆಯಲ್ಲಿ ಜೆಡಿಎಸ್​​ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲ! - MLA KM Shivalinge Gowda latest news

ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಯಾರಾದರು ತೊಂದರೆ ಕೊಟ್ಟರೆ ಕರಡಿ ರೀತಿಯಲ್ಲಿ ಪರಚಿ ಬಿಡುತ್ತೇನೆ ಎಂದು ವಿಧಾನಸಭೆಯಲ್ಲಿ ಗುಡುಗಿದ್ದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ, ಇಂದು ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಕೆಂಡಾಮಂಡಲರಾಗಿದ್ದರು.

Shivalinge Gowda
ಶಿವಲಿಂಗೇಗೌಡ

By

Published : Dec 27, 2019, 9:17 PM IST

ಹಾಸನ/ಅರಸೀಕೆರೆ:ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಯಾರಾದರು ತೊಂದರೆ ಕೊಟ್ಟರೆ ಕರಡಿ ರೀತಿಯಲ್ಲಿ ಪರಚಿ ಬಿಡುತ್ತೇನೆ ಎಂದು ವಿಧಾನಸಭೆಯಲ್ಲಿ ಗುಡುಗಿದ್ದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ, ಇಂದು ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಕೆಂಡಾಮಂಡಲರಾಗಿದ್ದರು.

ಸಭೆಯಲ್ಲಿ ಕೆಂಡಾಮಂಡಲರಾದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಕಲಚೇತನರ ಹಣ ದುರುಪಯೋಗ ಆಗಿದೆ ಎನ್ನುವ ಕಾಂಗ್ರೆಸ್ ಸದಸ್ಯರ ಪ್ರಶ್ನೆಗೆ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲವಾಗಿ ಬೈದಿದ್ದಾರೆ.

ಯಾವ ಎಂಎಲ್ಎ ಬರ್ತಾನೆ ತಾಲೂಕು ಪಂಚಾಯತಿ ಸಭೆಗೆ? ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಮನವಿ ಮೇರೆಗೆ ಸಭೆಗೆ ಹಾಜರಾಗಿದ್ದೇನೆ ಅಷ್ಟೇ. ನನ್ನನ್ನು ಕೇಳುವ ಅಧಿಕಾರ ಯಾರಿಗೂ ಇಲ್ಲ. ಯಾವನೋ ಹೇಳಿ ಕಳುಹಿಸಿದ ಅಂತ ನನ್ನನ್ನೇ ಪ್ರಶ್ನೆ ಮಾಡುತ್ತೀರಾ? ಎಂದು ಮಾಜಿ ಸಚಿವ ಬಿ.ಶಿವರಾಂ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಸದಸ್ಯರುಗಳ ಮೇಲೆ ಕೆಂಡಾಮಂಡಲವಾಗಿ ಸಭೆಯಿಂದ ಹೊರ ನಡೆದ ಪ್ರಸಂಗ ನಡೆದಿದೆ.

ABOUT THE AUTHOR

...view details