ಕರ್ನಾಟಕ

karnataka

ETV Bharat / state

ನನ್ನ ಕೆಲಸ ಸಹಿಸದ ಕಿಡಿಗೇಡಿಗಳು ಶಾಸಕ ಕಮಿಷನ್ ಹೊಡೀತಾನೆ ಅಂತಾರೆ: ಕೆ.ಎಂ ಶಿವಲಿಂಗೇಗೌಡ

ಕೋವಿಡ್ 3ನೇ ಅಲೆ ಪ್ರಾರಂಭವಾಗುತ್ತಿದೆ. ಎಚ್ಚರಿಕೆಯಿಂದ ಇರಬೇಕು. ರೋಗಿಗಳಿಗೆ ಫಲ್ಸ್ ರೇಟ್ ಕಡಿಮೆಯಾದಾಗ ವೈದ್ಯರು ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಸಲಹೆ ನೀಡಿದರು.

By

Published : May 16, 2021, 7:19 AM IST

arasikere
ಅರಸೀಕೆರೆ ಪಟ್ಟಣದಲ್ಲಿ 80 ಹಾಸಿಗೆಗಳ ಕೋವಿಡ್​ ಆಸ್ಪತ್ರೆ ಲೋಕಾರ್ಪಣೆ

ಅರಸೀಕೆರೆ(ಹಾಸನ):ನಾನು ಕ್ಷೇತ್ರದ ಅಭಿವೃದ್ಧಿ ಮಾಡಿದ್ರೂ 'ಇವ್ರ ಮನೆ ಕಾಯೋಗಾ ಶಾಸಕ ಕಮಿಷನ್ ಹೊಡೀತಾನೆ ಅಂತಾರಲ್ಲ.. ಇವ್ಕೆ ಏನ್ ಮಾಡ್ಬೇಕು ಹೇಳಿ?' ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ಹೆಚ್ಚುವರಿಯಾಗಿ 80 ಹಾಸಿಗೆಗಳ ಕೋವಿಡ್​ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದ ಬಳಿಕ ತಮ್ಮ ಅ;ರು ಉದ್ಘಾಟನಾ ಭಾಷಣ ಮಾಡಿದರು.

ನಾನು ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯದ ಕೆಲ ಮಂತ್ರಿಗಳ ಕೈ, ಕಾಲು ಹಿಡಿದು ಅನುದಾನ ತಂದು ಕಾಮಗಾರಿ ಮಾಡಿದ್ದೇನೆ. ಆದರೆ ಕೆಲವು ಕಿಡಿಗೇಡಿಗಳು ನನ್ನ ಕೆಲಸವನ್ನು ಸಹಿಸದೆ ಕಾಮಗಾರಿಯಲ್ಲಿ ಶಾಸಕ ಕಮಿಷನ್ ಹೊಡೀತಾನೆ ಎಂದು ಆರೋಪ ಮಾಡುತ್ತಾರೆ. ಆದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಅರಸೀಕೆರೆ ಪಟ್ಟಣದಲ್ಲಿ 80 ಹಾಸಿಗೆಗಳ ಕೋವಿಡ್​ ಆಸ್ಪತ್ರೆ ಲೋಕಾರ್ಪಣೆಗೊಳಿಸಿದ ಶಾಸಕ ಶಿವಲಿಂಗೇಗೌಡ

ರಾಜ್ಯದಲ್ಲಿ ಹೋಂ ಐಸೋಲೇಷನ್ ಕೈಬಿಡಬೇಕು. ಇಲ್ಲದಿದ್ದರೆ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಈ ವಿಚಾರವನ್ನು ನಾನು ವಿಧಾನಸಭೆಯಲ್ಲಿ ಹೇಳಿದ್ದೇನೆ. ನಮ್ಮ ಅರಸೀಕೆರೆ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಬಹಳ ಉತ್ತಮವಾಗಿದೆ. ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ನಿರ್ಮಾಣವಾಗಿದೆ. ದಯವಿಟ್ಟು ಸೋಂಕಿತರು ಮನೆಯಲ್ಲಿರುವ ಬದಲು ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಒಳಿತು ಎಂದು ಹೇಳಿದರು.

ಅರಸೀಕೆರೆ ಆಸ್ಪತ್ರೆಯಲ್ಲಿ ಕೆಲವು ವೈದ್ಯರು ಮತ್ತು ಸಿಬ್ಬಂದಿ ಸಾಕಷ್ಟು ನಿರ್ಲಕ್ಷ್ಯವಹಿಸ್ತಾರೆ. ಆನಾರೋಗ್ಯದಿಂದ ಬಳಲುತ್ತಿದ್ದರೂ ಮಧ್ಯಾಹ್ನದ ಊಟಕ್ಕಾಗಿ ರೋಗಿಗಳು ಸಿಬ್ಬಂದಿ ಬಳಿ ಹೋಗಿ ಕೆಲವು ಔಷಧಿ ಹಾಗೂ ಪರಿಕರಗಳನ್ನು ತರುತ್ತಾರೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
'ಪಕ್ಷಭೇದ ಮರೆತು 2ನೇ ಅಲೆ ತಡೆಯಬೇಕು'

ಪಕ್ಷಭೇದ ಮರೆತು ನಾವೆಲ್ಲ ಈ ಸಂದರ್ಭದಲ್ಲಿ ಕೋವಿಡ್ 2ನೇ ಅಲೆಯನ್ನು ತಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಶಾಸಕರಿಗೆ ಮತ್ತು ಜಿಲ್ಲೆಯ ಜನರಿಗೆ ಕರೆ ನೀಡಿದರು.

ಹಾಸನವನ್ನು ಹೊರತುಪಡಿಸಿದರೆ ಈಗ ಅರಸೀಕೆರೆಯಲ್ಲಿ ಕೂಡ 80 ಹಾಸಿಗೆಯುಳ್ಳ ಸಾರ್ವಜನಿಕ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಈ ಸಂದರ್ಭದಲ್ಲಿ ನಾವು ಇದನ್ನ ಬಹಳ ಜಾಗರೂಕತೆಯಿಂದ ಉಪಯೋಗಿಸಿಕೊಳ್ಳಬೇಕಿದೆ. ನಮ್ಮಲ್ಲಿ ಯಾವುದೇ ವೈಯಕ್ತಿಕ ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಒಟ್ಟಾಗಿ ಕೆಲಸ ಮಾಡಬೇಕು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಅದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ನೆರವು ನೀಡುವಂತೆ ನಾನು ಕೂಡ ಮನವಿ ಮಾಡುತ್ತೇನೆ ಎಂದರು.

ಬೇಲೂರು ಶಾಸಕ ಲಿಂಗೇಶ್, ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

ABOUT THE AUTHOR

...view details