ಕರ್ನಾಟಕ

karnataka

ETV Bharat / state

'ಯಾರು ಏನೇ ಹೇಳಿಕೊಂಡು ಓಡಾಡಲಿ, ರಾಜ್ಯದ ಮುಂದಿನ ಮುಖ್ಯಮಂತ್ರಿ ಇವರೇ'! - ಮಾಜಿ ಸಚಿವ ಹೆಚ್​​​.ಡಿ. ರೇವಣ್ಣ

ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗಲೇ ಹಾಸನದಲ್ಲಿ ಮಾಜಿ ಸಚಿವರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೂರು ಪಕ್ಷದ ಮುಖಂಡರು ಅವರವರ ನಾಯಕ ಮುಂದಿನ ಮುಖ್ಯಮಂತ್ರಿ ಆಗಲಿ ಎಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಸಿಎಂ ಆಗುವವರ​ ಪಟ್ಟಿ ದೊಡ್ಡದಾಗಿದೆ.

Former Minister H.D. Ravenna
ಸಂಹ್ರಹ ಚಿತ್ರ

By

Published : Jun 24, 2021, 5:31 PM IST

Updated : Jun 25, 2021, 10:01 AM IST

ಹಾಸನ:ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿದ್ದರೆ ಇತ್ತ ಕಾಂಗ್ರೆಸ್​ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಈ ನುಡುವೆ ಮಾಜಿ ಸಚಿವ ಹೆಚ್​ಡಿ ರೇವಣ್ಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಮುಂದಿನ ಮುಖ್ಯಮಂತ್ರಿಯ ಬಗ್ಗೆ ಭವಿಷ್ಯ ನುಡಿದ್ದಾರೆ.

ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನೋಡ್ರಿ ಯಾರು ಏನೇ ಹೇಳಿಕೊಂಡು ಓಡಾಡಲಿ. ಈ ರಾಜ್ಯದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಕುಮಾರಸ್ವಾಮಿನೇ ಆಗುತ್ತಾರೆ. ಇದರಲ್ಲಿ ಎರಡು ಮಾತಿಲ್ಲ, ಬೇಕಾದರೆ ಬರೆದಿಟ್ಟುಕೊಳ್ಳಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಹೆಚ್​ಡಿ ರೇವಣ್ಣ ಮಾಧ್ಯಮಗೋಷ್ಟಿ

ಇದನ್ನೂ ಓದಿ:ಮುಂದಿನ ಸಿಎಂ ವಿಚಾರ ಪ್ರಸ್ತಾಪ.. ಬೆಂಬಲಿತ ಶಾಸಕರಿಗೆ ಬ್ರೇಕ್​ ಹಾಕುತ್ತಾ ಸಿದ್ದರಾಮಯ್ಯ ಮಾತು?

ಎರಡೂ ರಾಷ್ಟ್ರೀಯ ಪಕ್ಷಗಳು ಸಿಎಂ ಸ್ಥಾನದ ಬಗ್ಗೆ ಮಾತುಕತೆ ನಡೆಸುವ ಮೂಲಕ ದೊಡ್ಡ ಸುದ್ದಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ನಾವು ಈ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದೇವೆ. ಇದನ್ನು ಜನರು ನೆನಪಿನಲ್ಲಿಟ್ಟುಕೊಂಡಿದ್ದಾರೆ. ಈ ಸಾಧನೆ ಹಿನ್ನೆಲೆ ನಮಗೆ ಅಧಿಕಾರ ಕೊಡಿ ಎಂದು ಕೇಳುತ್ತೇವೆ. ನಮಗೆ ವಿಶ್ವಾಸ ಇದೆ. ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ. ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಅನ್ನೋದಕ್ಕೆ ಆಗ ಉತ್ತರ ಸಿಗುತ್ತದೆ ಎಂದರು.

ಇದನ್ನೂ ಓದಿ: ರಾಜ್ಯ, ಕೇಂದ್ರ ಸರ್ಕಾರದ ಸಾಧನೆ ಏನು ಎನ್ನುವ ಕಾಂಗ್ರೆಸ್​ಗೆ ಮೂರೇ ತಿಂಗಳಲ್ಲಿ ಉತ್ತರ ನೀಡುವೆ: ಸಿಎಂ

ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ನಮ್ಮನ್ನು ಮನೆಗೆ ಕಳಿಸುತ್ತೇವೆಂದು ಇಲ್ಲ-ಸಲ್ಲದ ಹೇಳಿಕೆಗಳನ್ನು ನೀಡುತ್ತಾ ತಿರುಗಾಡುತ್ತಿದ್ದಾರೆ. 2023 ರ ಚುನಾವಣೆ ನಂತರ ನೋಡಿ, ಆಗ ನಿಮಗೇ ಉತ್ತರ ಸಿಗುತ್ತದೆ. ಮುಂದಿನ ಅಭ್ಯರ್ಥಿ ಅಷ್ಟೇ ಅಲ್ಲ, ಮುಂದಿನ ಮುಖ್ಯಮಂತ್ರಿ ಕೂಡ ಕುಮಾರಸ್ವಾಮಿನೇ ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಹೆಚ್​​​​.ಡಿ. ರೇವಣ್ಣ ಹಾಗೂ ಪಕ್ಷದ ಮುಖಂಡರು

ಕಳೆದ ನಾಲ್ಕು ತಿಂಗಳಲ್ಲಿ ಅಬಕಾರಿ ಇಲಾಖೆಯಲ್ಲಿ ಎರಡೂವರೆ ಸಾವಿರ ಕೋಟಿ ಹಣ ಬಂದಿದೆ. ಸಂಸದ ಮತ್ತು ಶಾಸಕರ ಜೊತೆಗೆ ಗ್ರಾಮ ಪಂಚಾಯತ್​ಗೆ ಬರುವ ಅನುದಾನದ ಹಣವನ್ನು ಸರ್ಕಾರ ತಡೆಹಿಡಿದಿತ್ತು.

ಬೇರೆ ಕಾರಣ ನೀಡಿ ನರೇಗಾ, ಜಿಲ್ಲಾ ಪಂಚಾಯತ್​ ಮತ್ತು ಗ್ರಾಮ ಪಂಚಾಯತ್​ ಹಣವನ್ನು ಕಟ್ ಮಾಡುತ್ತಿದ್ದಾರೆ. ಇದು ರಾಜ್ಯಮಟ್ಟದಲ್ಲಿ ದುಡ್ಡು ಹೊಡೆಯುವ ಕಾರ್ಯಕ್ರಮ ಅಷ್ಟೇ. ನೀವು ಪ್ರಾಮಾಣಿಕವಾಗಿದ್ದರೆ ಜಿಲ್ಲಾಮಟ್ಟದಲ್ಲಿ ಟೆಂಡರ್ ಕರೆಯಿರಿ. ಅದನ್ನು ಬಿಟ್ಟು ಪಂಚಾಯತ್​ ಸದಸ್ಯರ ಹಣ ಲೂಟಿ ಮಾಡಲಿಕ್ಕೆ ಹೋಗಬೇಡಿ. ಸರ್ಕಾರ ಲೂಟಿಕೋರರ ಕೈಗೆ ಸಿಲುಕಿದ್ದು, ಅವರೊಂದಿಗೆ ಸೇರಿ ಲೂಟಿ ಹೊಡೆಯೋಕೆ ನಿಂತಿದೆ ಎಂದು ಹೆಚ್ ​ಡಿ ರೇವಣ್ಣ ಗಂಭೀರ ಆರೋಪ ಮಾಡಿದರು.

Last Updated : Jun 25, 2021, 10:01 AM IST

ABOUT THE AUTHOR

...view details