ಕರ್ನಾಟಕ

karnataka

ETV Bharat / state

ಕಾಲು-ಬಾಯಿ ಜ್ವರದ ಉಚಿತ ಲಸಿಕೆ ಕಾರ್ಯಕ್ರಮಕ್ಕೆ ಶಾಸಕ ಚಾಲನೆ - free insulation for leg mouth disease

ಮನುಷ್ಯರ ಆರೋಗ್ಯಕ್ಕೆ ಹೆಚ್ಚು ಕಾಳಜಿ ನೀಡುವ ರೀತಿಯೇ ಜಾನುವಾರಗಳ ಆರೋಗ್ಯ ಕಾಪಾಡುವಲ್ಲೂ ಮುಂದಾಗಬೇಕು. ಅವುಗಳ ಸುಭದ್ರ ಆರೋಗ್ಯದ ದೃಷ್ಠಿಯಿಂದ  ತಾಲೂಕಿನಲ್ಲಿ 22 ದಿನಗಳ ಕಾಲ 9 ತಂಡಗಳು 375 ಹಳ್ಳಿಗಳಿಗೆ ತೆರಳಿ ಲಸಿಕೆ ಹಾಕಲಿವೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಕಾಲು-ಬಾಯಿ ಜ್ವರದ ಉಚಿತ ಲಸಿಕೆ ಕಾರ್ಯಕ್ರಮಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ

By

Published : Oct 15, 2019, 4:39 AM IST

ಹಾಸನ:ರಾಸುಗಳ ಆರೋಗ್ಯ ದೃಷ್ಠಿಯಿಂದ ಸರ್ಕಾರ ಪಶುಪಾಲನೆ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅವುಗಳಿಗೆ ಅವಶ್ಯವಿರುವ ಔಷಧಿಗಳನ್ನು ಒದಗಿಸುವಲ್ಲಿ ಮುಂದಾಗಬೇಕೆಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಕಾಲು-ಬಾಯಿ ಜ್ವರದ ಉಚಿತ ಲಸಿಕೆ ಕಾರ್ಯಕ್ರಮಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ

ಚನ್ನರಾಯಪಟ್ಟಣದ ತಾಲೂಕು ಪಶು ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ, ಹಾಗೂ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ 16 ನೇ ಸುತ್ತಿನ ಕಾಲು-ಬಾಯಿ ಜ್ವರದ ಉಚಿತ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಶಾಸಕ ಸಿ.ಎನ್​ ಬಾಲಕೃಷ್ಣ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯರ ಆರೋಗ್ಯಕ್ಕೆ ಹೆಚ್ಚು ಕಾಳಜಿ ನೀಡುವ ರೀತಿಯೇ ಜಾನುವಾರಗಳ ಆರೋಗ್ಯ ಕಾಪಾಡುವಲ್ಲೂ ಮುಂದಾಗಬೇಕು. ಅವುಗಳ ಸುಭದ್ರ ಆರೋಗ್ಯದ ದೃಷ್ಠಿಯಿಂದ ತಾಲೂಕಿನಲ್ಲಿ 22 ದಿನಗಳ ಕಾಲ 9 ತಂಡಗಳು 375 ಹಳ್ಳಿಗಳಿಗೆ ತೆರಳಿ ಲಸಿಕೆ ಹಾಕಲಿವೆ. ಲಸಿಕೆ ನೀಡುವ ವೇಳಾಪಟ್ಟಿಯನ್ನು ಅಯಾ ಗ್ರಾ.ಪಂ.ಗಳು ನೀಡಲಿದ್ದು, ಇದನ್ನರಿತು ರೈತರು ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಬೇಕೆಂದರು.

ABOUT THE AUTHOR

...view details