ಕರ್ನಾಟಕ

karnataka

ETV Bharat / state

ಕೊರೊನಾಗೆ ಬಲಿಯಾದ ದಲಿತ ಮುಖಂಡ: ಅಂತ್ಯಕ್ರಿಯೆಯಲ್ಲಿ ಶಾಸಕರು ಭಾಗಿ - Corona

ಕೋವಿಡ್​ನಿಂದ ಸಾವಿಗೀಡಾದ ದಲಿತ ಮುಖಂಡನ ಅಂತ್ಯಕ್ರಿಯೆಯಲ್ಲಿ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಭಾಗಿಯಾಗಿದ್ದಲ್ಲದೇ, ಶವಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

mla-attended-a-funeral-function-of-dalit-member-who-died-due-to-corona
ಅಂತ್ಯಕ್ರಿಯೆಯಲ್ಲಿ ಶಾಸಕರು ಭಾಗಿ

By

Published : Aug 10, 2020, 8:26 AM IST

Updated : Aug 10, 2020, 1:55 PM IST

ಹಾಸನ (ಅರಸೀಕೆರೆ): ಕೋವಿಡ್​ನಿಂದ ಸಾವಿಗೀಡಾದ ಪಟ್ಟಣದ ದಲಿತ ಮುಖಂಡನ ಅಂತ್ಯಕ್ರಿಯೆಯಲ್ಲಿ ಶಾಸಕರು ಪಿಪಿಟಿ ಕಿಟ್ ಧರಿಸಿ ಭಾಗಿಯಾಗಿದ್ದಲ್ಲದೇ, ಶವಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

ಕೋವಿಡ್​ನಿಂದ ಮೃತಪಟ್ಟ ತಾಲೂಕಿನ ದಲಿತ ಮುಖಂಡ ಮತ್ತು ಮೀಸೆ ರಾಮಣ್ಣ (54) ಅವರ ಅಂತ್ಯಕ್ರಿಯೆಯಲ್ಲಿ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಭಾಗಿಯಾಗಿದ್ದರು.

ಅಂತ್ಯಕ್ರಿಯೆಯಲ್ಲಿ ಶಾಸಕರು ಭಾಗಿ

ಕೋವಿಡ್​ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನ ವಾರಸುದಾರರಿಗೆ ನೀಡದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಯೇ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿಕೊಂಡಿದ್ದರು. ಈ ವೇಳೆ ಪಾರ್ಥಿವ ಶರೀರವನ್ನ ನೋಡಲು ಬಂದ ಶಾಸಕರು ಪಿಪಿಇ ಕಿಟ್​ ಧರಿಸಿ ಮೃತದೇಹದ ದರ್ಶನ ಪಡೆದರು. ಬಳಿಕ ಶ್ರದ್ದಾಂಜಲಿ ವಾಹನದಲ್ಲಿ ತೆರಳಿದ ಅವರು ಅರಸೀಕೆರೆ ಹೊರವಲಯದ ಸ್ಮಶಾನದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.

ರಾಜ್ಯದಲ್ಲಿ ಇದುವರೆಗೂ ಯಾವ ರಾಜಕಾರಣಿಗಳು ಸಹ ಇಂತಹ ಕಾರ್ಯ ನಡೆಸಿಲ್ಲ. ಈ ಹಿನ್ನಲೆಯಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Aug 10, 2020, 1:55 PM IST

ABOUT THE AUTHOR

...view details