ಕರ್ನಾಟಕ

karnataka

ETV Bharat / state

ರಸ್ತೆ ಬದಿ ಮಳಿಗೆಗಳ ಸ್ಥಳಾಂತರಕ್ಕೆ ಶಾಸಕ ರಾಮಸ್ವಾಮಿ ಮನವಿ - hassan latest news

ಅರಕಲಗೂಡು ಕೊಣನೂರಿನ ಸಂತೆಮಾಳದಲ್ಲಿ ಬೀದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದ್ದು, ಹಾಸನ-ಮಡಿಕೇರಿ ವಾಹನ ಸಂಚಾರ ಕಿರಿಕಿರಿ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಸ್ಥಳಾಂತರಿಸುವಂತೆ ಶಾಸಕ ಎ.ಟಿ.ರಾಮಸ್ವಾಮಿ ಮಾಲೀಕರಲ್ಲಿ ಮನವಿ ಮಾಡಿದರು.

mla a.t.ramswami
ಶಾಸಕ ರಾಮಸ್ವಾಮಿ ಮನವಿ

By

Published : Sep 5, 2020, 7:59 PM IST

ಅರಕಲಗೂಡು: ಇಲ್ಲಿನ ಕೊಣನೂರು ಸಂತೆಮಾಳದ ಬೀದಿ ಬದಿಯ ವ್ಯಾಪಾರಸ್ಥರಿಗೆ ಬೇರೆಡೆ ಮಳಿಗೆಗಳನ್ನು ಸ್ಥಳಾಂತರಿಸುವಂತೆ ಶಾಸಕ ಎ.ಟಿ.ರಾಮಸ್ವಾಮಿ ಮನವಿ ಮಾಡಿದರು.

ಶಾಸಕ ರಾಮಸ್ವಾಮಿ ಮನವಿ

ಹಾಸನ-ಮಡಿಕೇರಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದು, ರಸ್ತೆಬದಿಯ ಮಳಿಗೆಗಳಿಂದ ವಾಹನ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ. ಮಾರುಕಟ್ಟೆ ಪ್ರಾಂಗಣದ ಉದ್ಘಾಟನೆ ವೇಳೆ ಶಾಸಕ ರಾಮಸ್ವಾಮಿ ಅವರು, ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದರು.

ಶಾಸಕರ ಸೂಚನೆಯಂತೆ ಪ್ರಾಂಗಣದಲ್ಲಿನ 44 ಸ್ಥಳಗಳನ್ನು ಬಿಡ್ ಮಾಡಲಾಗಿತ್ತು. ಉಳಿದ 21 ವಿವಿಧ ಅಂಗಡಿ ಮಾಲೀಕರು ಮತ್ತು ಹೂ ವ್ಯಾಪಾರಿಗಳು ರಸ್ತೆ ಬದಿಯನ್ನು ಬಿಟ್ಟು ಹೋಗುವುದಿಲ್ಲವೆಂದು ಹಠ ಹಿಡಿದಿದ್ದರು. ಅವರನ್ನು ಶಾಸಕರು ಮನವೊಲಿಸಿದರು.

ಇಲ್ಲಿನ ಗಾಂಧಿ ಸರ್ಕಲ್ ಅಥವಾ ಬಿ.ಎಂ.ಶೆಟ್ಟಿ ಕಾಲೇಜು ಮುಂಭಾಗದ ರಸ್ತೆಯಲ್ಲಿ ವ್ಯಾಪಾರ ನಡೆಸಿ, ಇನ್ನೂ ಹೂ ವ್ಯಾಪಾರಿಗಳು ಗೋಪಾಲ ಕೃಷ್ಣಸ್ವಾಮಿ ದೇವಾಲಯದ ಎದುರು ವ್ಯಾಪಾರ ಮುಂದುವರಿಸಿ ಎಂದು ಮನವಿ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ.ರಮೇಶ್, ಸದಸ್ಯ ಬಿ.ನಾಗರಾಜು ಇದ್ದರು.

ABOUT THE AUTHOR

...view details