ಕರ್ನಾಟಕ

karnataka

ETV Bharat / state

ದೊರೆಸ್ವಾಮಿ ಅವರ ಅಸ್ಥಿ ವಿಸರ್ಜಿಸಿದ ಬಳಿಕ ಶಾಸಕ ಎ.ಟಿ.ರಾಮಸ್ವಾಮಿ ಹೇಳಿದಿಷ್ಟು? - ದೊರೆಸ್ವಾಮಿಯವರನ್ನು ನೆನೆದು ಭಾವುಕರಾದ ಶಾಸಕ ಎ.ಟಿ.ರಾಮಸ್ವಾಮಿ

ದೊರೆಸ್ವಾಮಿ ಅವರು, ಮೌಢ್ಯ ವಿರೋಧಿಗಳು, ಚಿತಾಭಸ್ಮ ಮತ್ತು ಮುಂತಾದ ಕಾರ್ಯಕ್ರಮಗಳ ತ್ಯಾಜ್ಯ ವಸ್ತುಗಳನ್ನು ನೀರಿಗೆ ಬಿಡುವ ಮೂಲಕ ಜಲ ಮಲಿನಗೊಳಿಸಬೇಡಿ ಎಂದು ಹೇಳುತ್ತಿದ್ದರು. ನನ್ನ ಸ್ನೇಹಿತರು ಮತ್ತು ಅವರ ಕುಟುಂಬದವರ ಮನವಿಯಂತೆ ಅಸ್ತಿಯನ್ನು ವಿಸರ್ಜನೆ ಮಾಡುತ್ತಿದ್ದೇನೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಪ್ರತಿಕ್ರಿಯಿಸಿದರು.

ಶಾಸಕ ಎ.ಟಿ.ರಾಮಸ್ವಾಮಿ
ಶಾಸಕ ಎ.ಟಿ.ರಾಮಸ್ವಾಮಿ

By

Published : May 27, 2021, 7:44 PM IST

ಹಾಸನ: ದೊರೆಸ್ವಾಮಿಯವರು ಸಾಯುವ ಮುನ್ನ ನನಗೆ ದೂರವಾಣಿ ಕರೆ ಮಾಡಿ ಗೆಳೆಯ ನಾನು ಸಂತೋಷವಾಗಿ ಹೋಗಿ ಬರುತ್ತೇನೆ. ನಾನು ಇಲ್ಲಿದ್ದರೂ ಸರಿ, ಮೇಲಿದ್ದರೂ ಸರಿ ನಿನ್ನನ್ನು ಯಾವಾಗಲೂ ನೆನಪು ಮಾಡಿಕೊಳ್ಳುತ್ತೇನೆ ಎಂದಾಗ ನಾನು ಏನು ಮಾತನಾಡಬೇಕೆಂದು ತೋಚಲಿಲ್ಲ ಎಂದು ದೊರೆಸ್ವಾಮಿ ಅವರೊಂದಿಗಿನ ಮಾತುಕತೆ ನೆನೆದು ಶಾಸಕ ಎ.ಟಿ.ರಾಮಸ್ವಾಮಿ ಭಾವುಕರಾದರು.

ದೊರೆಸ್ವಾಮಿಯವರನ್ನು ನೆನೆದು ಭಾವುಕರಾದ ಶಾಸಕ ಎ.ಟಿ.ರಾಮಸ್ವಾಮಿ..!

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದ ಕಾವೇರಿ ನದಿಯ ಬಳಿ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಚಿತಾಭಸ್ಮ ವಿಸರ್ಜನೆ ಮಾಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ದೊರೆಸ್ವಾಮಿ ಅವರು, ಮೌಢ್ಯ ವಿರೋಧಿಗಳು, ಚಿತಾಭಸ್ಮ ಮತ್ತು ಮುಂತಾದ ಕಾರ್ಯಕ್ರಮಗಳ ತ್ಯಾಜ್ಯವಸ್ತುಗಳನ್ನು ನೀರಿಗೆ ಬಿಡುವ ಮೂಲಕ ಜಲ ಮಲಿನಗೊಳಿಸಬೇಡಿ ಎಂದು ಹೇಳುತ್ತಿದ್ದರು. ನನ್ನ ಸ್ನೇಹಿತರು ಮತ್ತು ಅವರ ಕುಟುಂಬದವರ ಮನವಿಯಂತೆ ಅಸ್ತಿಯನ್ನು ವಿಸರ್ಜನೆ ಮಾಡುತ್ತಿದ್ದೇನೆ. ಇಂದು ಅವರ ಚಿತಾಭಸ್ಮಕ್ಕೆ ಕಾವೇರಿಯ ಗಂಗಾ ಜಲವನ್ನು ಸಂಪ್ರೋಕ್ಷಣೆ ಮಾಡಿ ಅದನ್ನು ದೇವಾಲಯದ ಪಕ್ಕದ ತೆಂಗಿನ ಮರವೊಂದರ ಕೆಳಗೆ ವಿಸರ್ಜನೆ ಮಾಡುವ ಮೂಲಕ ತಮ್ಮ ಗೆಳೆಯನಿಗೆ ಅಂತಿಮ ನಮನ ಸಲ್ಲಿಸಿದರು. ಚಿತಾಭಸ್ಮದ ಒಂದಿಡಿಯನ್ನು ಅವರ ನೆನಪಿಗಾಗಿ ತೆಗೆದುಕೊಂಡು ತನ್ನ ಮನೆಯ ಮುಂದಿನ ಗಿಡವೊಂದಕ್ಕೆ ಹಾಕುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು.

ಸಾಯುವ ಮುನ್ನ ಅವರ ಉತ್ತರಾಧಿಕಾರಿಯಾಗಿ ಎಂದು ಮನವಿ ಮಾಡಿದ್ರು. ಆದರೆ ಅವರ ಭಾವನೆಗಳನ್ನು ಪೂರೈಸುವಷ್ಟು ನಾನು ದೊಡ್ಡವನಲ್ಲ. ಅವರ ಆಶಯವನ್ನು ಸ್ವಲ್ಪಮಟ್ಟಿಗಾದರೂ ಪೂರೈಸುವ ಕೆಲಸ ಮಾಡಬಹುದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದ ದೊರೆಸ್ವಾಮಿ ಅವರು, ಭ್ರಷ್ಟಾಚಾರದ ವಿರುದ್ದ ದನಿ ಎತ್ತಿದಾಗ ಸಾಕಷ್ಟು ನಿಂದನೆಗಳನ್ನು ಎದುರಿಸಿದ್ದರು. ಅವರ ಜೊತೆ ನಾನು ಸುಮಾರು 31 ದಿನ ಅಹೋರಾತ್ರಿ ಧರಣೆ ನಡೆಸಿದ್ದೇನೆ. ಅಂತಹ ದೇಶಭಕ್ತನ ಆದರ್ಶಗಳು ಎಲ್ಲರಿಗೂ ಮಾದರಿಯಾಗಬೇಕು ಎಂದರು.

ABOUT THE AUTHOR

...view details