ಅರಕಲಗೂಡು: ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಶಾಸಕ ಎ.ಟಿ.ರಾಮಸ್ವಾಮಿ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಅರಕಲಗೂಡು: ಸಬ್ ರಿಜಿಸ್ಟ್ರಾರ್ ಕಚೇರಿಗೆ ಶಾಸಕ ರಾಮಸ್ವಾಮಿ ದಿಢೀರ್ ಭೇಟಿ - ಶಾಸಕ ಎಟಿ.ರಾಮಸ್ವಾಮಿ
ಹಾಸನ ಜಿಲ್ಲೆಯ ಅರಕಲಗೂಡಿನ ಸಬ್ ರಿಜಿಸ್ಟ್ರಾರ್ ಕಚೇರಿಗೆ ಶಾಸಕ ಎ.ಟಿ.ರಾಮಸ್ವಾಮಿ ದಿಢೀರ್ ಭೇಟಿ ನೀಡಿದರು.
ಅರಕಲಗೂಡು: ಸಬ್ ರಿಜಿಸ್ಟ್ರಾರ್ ಕಚೇರಿಗೆ ಶಾಸಕ ಎ.ಟಿ.ರಾಮಸ್ವಾಮಿ ದಿಢೀರ್ ಭೇಟಿ..
ಹಾಸನ ಜಿಲ್ಲೆಯ ಅರಕಲಗೂಡಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಲ್ಲಾಳಿಗಳು ಅನಧಿಕೃತವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಪದೇ ಪದೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕಚೇರಿಗೆ ಶಾಸಕ ಎ.ಟಿ.ರಾಮಸ್ವಾಮಿ ದಿಢೀರ್ ಭೇಟಿ ನೀಡಿದರು.
ಈ ವೇಳೆ ದಲ್ಲಾಳಿಗಳಿಗೆ ಐಡಿ ಕಾರ್ಡ್ ನೀಡುವಂತೆ ಶಾಸಕರು ಆಗ್ರಹಿಸಿದರು. ಸಬೂಬು ಹೇಳಲು ಮುಂದಾದ ದಲ್ಲಾಳಿಗಳ ವಿರುದ್ಧ ಕಿಡಿಕಾರಿದ ಶಾಸಕರು, ಅನಧಿಕೃತವಾಗಿ ಹೇಗೆ ದಲ್ಲಾಳಿಗಳಿಗೆ ಕಚೇರಿಯೊಳಗೆ ಕೆಲಸ ನಿರ್ವಹಿಸಲು ಬಿಡುತ್ತೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.