ಅರಕಲಗೂಡು (ಹಾಸನ): ಕೊಣನೂರಿನ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕ ಎ ಟಿ ರಾಮಸ್ವಾಮಿ ಹಾಜರಾತಿ ಪುಸ್ತಕ ಪರಿಶೀಲಿಸಿದರು. ಕಚೇರಿಯಲ್ಲಿ ಸಿಬ್ಬಂದಿ ಇಲ್ಲದಿರುವುದನ್ನು ಕಂಡ ಶಾಸಕರು ಸಿಡಿಮಿಡಿಗೊಂಡರು.
ಕಚೇರಿ ಕಾಯ್ತಾ ನಿಮ್ಮನ್ನೂ ರೈತರು, ಜನ ಕಾಯಬೇಕೇ?-ಶಾಸಕ ಎ ಟಿ ರಾಮಸ್ವಾಮಿ ಸಿಡಿಮಿಡಿ - mla a t ramaswamy
ಸಣ್ಣಪುಟ್ಟ ಕೆಲಸಗಳಿಗೂ ರೈತರನ್ನು ಕಚೇರಿಗೆ ಪದೇಪದೆ ಸುತ್ತುವಂತೆ ಮಾಡುತ್ತಿದ್ದಾರೆಂಬ ದೂರು ಬಂದಿವೆ. ನಿಮ್ಮ ಕಚೇರಿಯಲ್ಲಿಯೇ ಆಗುವ ತಪ್ಪುಗಳಿಗೆ ರೈತರನ್ನೇಕೆ ಸುತ್ತಾಡಿಸುತ್ತೀರಿ..
ಬೆಳಗ್ಗೆ ಕೊಣನೂರಿನ ನಾಡ ಕಚೇರಿಗೆ ಶಾಸಕರು ದಿಢೀರ್ ಭೇಟಿ ನೀಡಿದ ಸಂದರ್ಭ ಗ್ರಾಮ ಸೇವಕರೊಬ್ಬರನ್ನು ಹೊರತುಪಡಿಸಿ ಬೇರೆ ಯಾವುದೇ ಅಧಿಕಾರಿಗಳು ಕಚೇರಿಗೆ ಬಂದಿರಲಿಲ್ಲ. ಇದನ್ನು ಕಂಡು ತರಾಟೆಗೆ ತೆಗೆದುಕೊಂಡರು.
ನಂತರ ಗ್ರಾಮಲೆಕ್ಕಿಗ ಮೋಹನ್ ನಾಯ್ಕರೊಂದಿಗೆ ಮಾತನಾಡುತ್ತಾ, ಸಣ್ಣಪುಟ್ಟ ಕೆಲಸಗಳಿಗೂ ರೈತರನ್ನು ಕಚೇರಿಗೆ ಪದೇಪದೆ ಸುತ್ತುವಂತೆ ಮಾಡುತ್ತಿದ್ದಾರೆಂಬ ದೂರು ಬಂದಿವೆ. ತಮ್ಮ ಕೆಲಸಕ್ಕಾಗಿ ಬೆಳಗ್ಗೆಯೇ ಬಂದು ಕಚೇರಿಯ ಬಳಿ ಕಾಯುವ ಜನ ನಿಮ್ಮನ್ನೂ ಸಹ ಕಾಯಬೇಕೇ? ನಿಮ್ಮ ಕಚೇರಿಯಲ್ಲಿಯೇ ಆಗುವ ತಪ್ಪುಗಳಿಗೆ ರೈತರನ್ನೇಕೆ ಸುತ್ತಾಡಿಸುತ್ತೀರಿ ಎಂದು ಪ್ರಶ್ನಿಸಿದರು.