ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಕೊರಿಯರ್‌ ಮೂಲಕ ಬಂದ ಮಿಕ್ಸಿ ಬ್ಲಾಸ್ಟ್! ಮಾಲೀಕನಿಗೆ ಗಂಭೀರ ಗಾಯ - ಕೋರಿಯರ್ ಆಫೀಸ್​ನಲ್ಲಿ ಮಿಕ್ಸರ್ ಸ್ಫೋಟ

ಹಾಸನದ ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಬ್ಲಾಸ್ಟ್. ಕಚೇರಿಯ ಮಾಲೀಕನಿಗೆ ಗಂಭೀರ ಗಾಯ. ಸ್ಥಳಕ್ಕೆ ಎಸ್​ಪಿ ಭೇಟಿ, ಪರಿಶೀಲನೆ.

ಹಾಸನದಲ್ಲಿ ಕೊರಿಯರ್​ಗೆ ಬಂದ ಮಿಕ್ಸಿ ಬ್ಲಾಸ್ಟ್
ಹಾಸನದಲ್ಲಿ ಕೊರಿಯರ್​ಗೆ ಬಂದ ಮಿಕ್ಸಿ ಬ್ಲಾಸ್ಟ್

By

Published : Dec 26, 2022, 11:01 PM IST

Updated : Dec 27, 2022, 1:20 PM IST

ಹಾಸನದಲ್ಲಿ ಮಿಕ್ಸಿ ಬ್ಲಾಸ್ಟ್ ಕುರಿತು ಎಸ್​ಪಿ ಹೇಳಿಕೆ...

ಹಾಸನ:ಕೊರಿಯರ್ ಶಾಪ್​​ವೊಂದರಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿ ಮಾಲೀಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಇಂದು ಸಂಜೆ 7:30ರ ಸಂದರ್ಭದಲ್ಲಿ ಘಟನೆ ನಡೆದಿದೆ. ಕೊರಿಯರ್​​ನಲ್ಲಿ ಬಂದಿದ್ದ ಮಿಕ್ಸಿಯನ್ನು ತರೆಯುವ ಸಂದರ್ಭದಲ್ಲಿ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ನಗರದ ಕೆ ಆರ್ ಪುರಂ ಬಡಾವಣೆಯಲ್ಲಿರುವ ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಬ್ಲಾಸ್ಸ್‌​ ಆಗಿದೆ. ಕಚೇರಿ ಮಾಲೀಕ ಶಶಿ ಎಂಬುವರ ಬಲಗೈ ಐದು ಬೆರಳುಗಳು ಸಂಪೂರ್ಣ ತುಂಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಎಸ್​ಪಿ ಹರಿರಾಮ್ ಶಂಕರ್, ಗಾಯಾಳುವಿಗೆ ಯಾವುದೇ ಪ್ರಾಣಾಪಾಯ ಆಗಿಲ್ಲ. ಮಿಕ್ಸಿ ಬ್ಲೇಡ್ ತಾಗಿ ಅವರಿಗೆ ಪೆಟ್ಟಾಗಿದೆ. ಮೈಸೂರಿನಿಂದ ಎಫ್ ಎಸ್ ಎಲ್ ತಂಡ ಆಗಮಿಸಿ, ಪರಿಶೀಲನೆ ನಡೆಸಲಿದೆ. ಕೊರಿಯರ್ ಎಲ್ಲಿಂದ ಬಂತು ಅನ್ನೋ ಮಾಹಿತಿ ಇದೆ. ಯಾವುದೇ ಊಹಾಪೋಹ, ಗೊಂದಲ ಬೇಡ. ಪರಿಶೀಲನೆ ನಡೆಸುತ್ತಿದ್ದೇವೆ. ಎಫ್ಎಸ್ಎಲ್ ನೀಡುವ ವೈಜ್ಞಾನಿಕ ಸಾಕ್ಷ್ಯಾಧಾರದ ಆಧರಿಸಿ ತನಿಖೆ ಮುಂದುವರಿಸಲಾಗುತ್ತದೆ ಎಂದರು.

ಎರಡು ದಿನಗಳ ಹಿಂದೆ ಡಿಟಿಡಿಸಿ ಕೊರಿಯರ್​ಗೆ ಬಂದಿದ್ದ ಪಾರ್ಸೆಲ್ ಅನ್ನು ನಗರದ ವ್ಯಕ್ತಿ ಒಬ್ಬರಿಗೆ ಡೆಲಿವರಿ ಮಾಡಿದ್ದರು. ಆದರೆ ಎರಡು ದಿನಗಳ ಬಳಿಕ ಮಿಕ್ಸಿ ಸೂಕ್ತ ವಿಳಾಸದಿಂದ ಬಂದಿಲ್ಲ ಎಂದು ಕೊರಿಯರ್​ಗೆ ವಾಪಸ್ ನೀಡಿದ ವ್ಯಕ್ತಿ, ವಾಪಸ್ ಪಡೆಯುವ ವೇಳೆ ಘಟನೆ ಸಂಭವಿಸಿದೆ. ಬ್ಲಾಸ್ಟ್ ಆದ ಹಿನ್ನೆಲೆಯಲ್ಲಿ ಕೊರಿಯರ್​ನ ಹಲವು ವಸ್ತುಗಳಿಗೆ ಹಾನಿಯಾಗಿದೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ಕುಕ್ಕರ್ ಬ್ಲಾಸ್​ ಬೆನ್ನಲ್ಲೇ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

(ಓದಿ: ಸ್ಫೋಟದ ಪ್ರಮುಖ ಆರೋಪಿ ಶಾರೀಕ್​ಗೆ ಐಸಿಸ್‌ ಉಗ್ರ ಸಂಘಟನೆ ಪ್ರೇರಣೆ: ಎಡಿಜಿಪಿ ಅಲೋಕ್‌ ಕುಮಾರ್)

Last Updated : Dec 27, 2022, 1:20 PM IST

ABOUT THE AUTHOR

...view details