ಹಾಸನ: ಕಾಂಗ್ರೆಸ್ನಲ್ಲಿ ಇಲ್ಲದಿರುವ ಕುರ್ಚಿಗೆ ಟವೆಲ್ ಹಾಕ್ತಾರೆ. ಅವರ ರೈಲು ಇನ್ನೂ ಸಹ ಹಳಿಗೆ ಬಂದಿಲ್ಲ. ಮುಖ್ಯವಾಗಿ ಅದಕ್ಕೆ ಇಂಜಿನ್ ಹಾಗೂ ಡ್ರೈವರ್ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತ - ಹಿಂದುಳಿದ, ಒಕ್ಕಲಿಗ, ಲಿಂಗಾಯಿತ ಎಂದು 4 ಭಾಗ ಮಾಡಿಕೊಂಡಿದ್ದಾರೆ. ಹೀಗಿರುವಾಗ ಕಾಂಗ್ರೆಸ್ಗೆ ರಾಜ್ಯದಲ್ಲಿ ಭವಿಷ್ಯ ಇಲ್ಲ. ಇನ್ನು ರಮೇಶ್ ಜಾರಕಿಹೊಳಿ ಅವರ ಬಗ್ಗೆ ಮಾತನಾಡುವುದಾದರೆ, ಅವರು ನಮ್ಮ ಪಕ್ಷದಲ್ಲಿಯೇ ಇರುತ್ತಾರೆ. ಈ ಬಗ್ಗೆ ಸ್ಪಷ್ಟನೆಯನ್ನೂ ಸಹ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: 'ಕರ್ನಾಟಕದ ರಾಜಕೀಯ ಹುಲಿ ಸಿದ್ದರಾಮಯ್ಯ': ಮೈಸೂರಲ್ಲಿ ಮಾರ್ದನಿಸಿತು ಅಭಿಮಾನಿಗಳ ಘೋಷಣೆ