ಹಾಸನ: ನೋಡಿ ನಾವು ಈಗ ಬಾಂಬೆ ಬ್ರದರ್ಸ್ ಅಲ್ಲ, ಬಿಜೆಪಿ ಪಕ್ಷದ ಸದಸ್ಯರುಗಳು. ಹೈಕಮಾಂಡ್ ಯಾವ ರೀತಿ ಸೂಚನೆ ಕೊಡುತ್ತದೆ ಆ ರೀತಿ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಗೋಪಾಲಯ್ಯ ಹೇಳಿದ್ದಾರೆ.
ನಾವೀಗ ಬಾಂಬೆ ಬ್ರದರ್ಸ್ ಅಲ್ಲ, ಬಿಜೆಪಿ ಪಕ್ಷದ ಸದಸ್ಯರು: ಸಚಿವ ಕೆ.ಗೋಪಾಲಯ್ಯ - ಹಾಸನದಲ್ಲಿ ಸಚಿವ ಕೆ. ಗೋಪಾಲಯ್ಯ ಹೇಳಿಕೆ
ಪಕ್ಷ ಮತ್ತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವಂತೆ ನಾವು ನಡೆದುಕೊಳ್ಳುತ್ತೇವೆ. ಈಗಾಗಲೇ ನಮಗೆ ಪಕ್ಷ ಎಲ್ಲಾ ಸ್ಥಾನಮಾನಗಳನ್ನು ಕೊಟ್ಟಿದೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಮನಪೂರ್ವಕವಾಗಿ ನಾವು ಪಕ್ಷಕ್ಕೆ ಬಂದು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ ಎಂದು ಕೆ.ಗೋಪಾಲಯ್ಯ ಹೇಳಿದ್ದಾರೆ.
ಹಾಸನದಲ್ಲಿ ಸಚಿವ ಕೆ. ಗೋಪಾಲಯ್ಯ ಹೇಳಿಕೆ
ಸಕಲೇಶಪುರದಲ್ಲಿ ಮಾತನಾಡಿದ ಅವರು, ಹೊಸ ಮುಖ್ಯಮಂತ್ರಿ ಬಂದರೆ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾದರೆ ವಾಪಸ್ ಮಾತೃಪಕ್ಷಕ್ಕೆ ಹೋಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರ ನೀಡುತ್ತಾ, ಯಾವುದೇ ಅನುಮಾನ ಬೇಡ. ನಾವು ಬಿಜೆಪಿ ಪಕ್ಷದ ಸದಸ್ಯರಾಗಿದ್ದು ಹೈಕಮಾಂಡ್ ಸೂಚನೆಯಂತೆ ಕಾರ್ಯನಿರ್ವಹಿಸುತ್ತೇವೆ. ಯಾವುದೇ ಕಾರಣಕ್ಕೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ನಾವು ಬಿಜೆಪಿ ಪಕ್ಷದವರು ಎಂದ ಮೇಲೆ ಬೇರೆ ಪಕ್ಷಕ್ಕೆ ಹೋಗುವ ಮಾತೇಕೆ? ಎಂದರು.
ಇದನ್ನೂ ಓದಿ : ನಾನು ಹೈಕಮಾಂಡ್ ಹಾಕಿದ ಗೆರೆ ದಾಟುವುದಿಲ್ಲ: ಬಿ.ಎಸ್.ಯಡಿಯೂರಪ್ಪ