ಹಾಸನ:ಸಚಿವ ಸಿ.ಟಿ. ರವಿ ಹಾಗೂ ಮಾಧುಸ್ವಾಮಿ ಹಾಸನ ತಾಲೂಕಿನ ಹರಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಅಪಾಯಕಾರಿ ಕೆರೆ ಏರಿಗಳನ್ನು ಪರಿಶೀಲನೆ ನಡೆಸಿದ ಸಚಿವ ಸಿ.ಟಿ. ರವಿ, ಮಾಧುಸ್ವಾಮಿ - ಹಾಸನ ತಾಲೂಕಿನ ಹರಳಹಳ್ಳಿ ಗ್ರಾಮ
ಹಾಸನ ಜಿಲ್ಲೆಯ ಅಪಾಯಕಾರಿಯಾಗಿ ಬಿರುಕುಬಿಟ್ಟಿರುವ ಕೆರೆಗಳ ಏರಿಗಳನ್ನು ಸಚಿವ ಸಿ.ಟಿ. ರವಿ ಹಾಗೂ ಮಾಧುಸ್ವಾಮಿ ಪರಿಶೀಲಿಸಿದ್ರು. ತಾಂತ್ರಿಕತೆಗಳನ್ನು ಬಳಸಿ ಕೆರೆ ಏರಿ ಕೊಚ್ಚಿ ಹೋಗದಂತೆ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಅಪಾಯಕಾರಿ ಕೆರೆ ಏರಿಗಳನ್ನು ಪರಿಶೀಲನೆ ನಡೆಸಿದ ಸಚಿವ ಸಿ.ಟಿ. ರವಿ, ಮಾಧುಸ್ವಾಮಿ
ಅಪಾಯಕಾರಿಯಾಗಿ ಬಿರುಕು ಬಿಟ್ಟಿರುವ ಕೆರೆ ಏರಿಗಳನ್ನು ಪರಿಶೀಲಿಸಿದ ಅವರು, ಕೃಷಿಕರಿಗೆ, ಜನಸಾಮಾನ್ಯರಿಗೆ ಇದರಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂಬಂಧ ತಾಂತ್ರಿಕತೆಗಳನ್ನು ಬಳಸಿ ಕೆರೆ ಏರಿ ಕೊಚ್ಚಿ ಹೋಗದಂತೆ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.