ಕರ್ನಾಟಕ

karnataka

ETV Bharat / state

ನಾಲ್ಕೂ ನಿಗಮಗಳನ್ನು ವಿಲೀನಗೊಳಿಸಿ: ಕೆಎಸ್​ಆರ್​ಟಿಸಿ ಫೆಡರೇಷನ್ ಅಧ್ಯಕ್ಷ ಅನಂತಸುಬ್ಬರಾವ್ ಮನವಿ - ಕೆಎಸ್​ಆರ್​ಟಿಸಿ ಫೆಡರೇಷನ್ ಅಧ್ಯಕ್ಷ ಅನಂತಸುಬ್ಬರಾವ್ ಮನವಿ

ಕೆಎಸ್​ಆರ್​ಟಿಸಿ ಫೆಡರೇಷನ್ ಅಧ್ಯಕ್ಷ ಅನಂತಸುಬ್ಬರಾವ್ ಅವರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳನ್ನು ವಿಲೀನ ಮಾಡಿ ನೌಕರರ ಪೂರ್ಣ ವೇತನ ಕೊಡುವಂತೆ ಮನವಿ ಮಾಡಿದರು.

ಕೆಎಸ್​ಆರ್​ಟಿಸಿ ಫೆಡರೇಷನ್ ಅಧ್ಯಕ್ಷ ಅನಂತಸುಬ್ಬರಾವ್ ಮನವಿ
KSRTC Federation president Anantasubarao appeals

By

Published : Jan 20, 2021, 9:44 AM IST

ಹಾಸನ: ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳನ್ನು ವಿಲೀನ ಮಾಡಿ ನೌಕರರ ಪೂರ್ಣ ವೇತನ ಕೊಡುವಂತೆ ಕೆಎಸ್​ಆರ್​ಟಿಸಿ ಸ್ಟಾಫ್ ಅಂಡ್ ವರ್ಕಸ್ ಫೆಡರೇಷನ್ ಅಧ್ಯಕ್ಷರಾದ ಹೆಚ್.ವಿ. ಅನಂತಸುಬ್ಬರಾವ್ ಸರ್ಕಾರಕ್ಕೆ ಆಗ್ರಹಿಸಿದರು.

ಕೆಎಸ್​ಆರ್​ಟಿಸಿ ಫೆಡರೇಷನ್ ಅಧ್ಯಕ್ಷ ಅನಂತಸುಬ್ಬರಾವ್ ಸುದ್ದಿಗೋಷ್ಠಿ

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದ್ವಿಪಕ್ಷೀಯ ಒಪ್ಪಂದಗಳ ಬದಲು ಸರ್ಕಾರವು ನಾಲ್ಕು ವರ್ಷಕ್ಕೊಮ್ಮೆ ಏಕಪಕ್ಷೀಯವಾಗಿ ಸ್ವಲ್ಪ ಹೆಚ್ಚಿಗೆ ಹಣವನ್ನು ಕೊಟ್ಟು ಅದನ್ನೆ ವೇತನ ಹೆಚ್ಚಳ ಎನ್ನುತ್ತಿದೆ. ಇಂತಹ ನೀತಿಯಿಂದ ಸಾರಿಗೆ ನಿಗಮಗಳ ನೌಕರರಿಗೂ ಮತ್ತು ಸರ್ಕಾರಿ ನೌಕರರಿಗೂ ವೇತನದಲ್ಲಿ ತುಂಬಾ ವ್ಯತ್ಯಾಸವಾಗಿದ್ದು, 2020ರಿಂದ ವೇತನ ಹೆಚ್ಚಳ ಮಾಡುವಾಗ ತೀರ್ಪನ್ನು ಸಂಪೂರ್ಣವಾಗಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.

ಸಾರಿಗೆ ನಿಗಮದ ಗ್ರಾಚ್ಯುಟಿ ನಿಯಮದಂತೆ ಅಥವಾ 1972ರ ಗ್ರಾಚ್ಯುಟಿ ಕಾಯ್ದೆಯಂತೆ ಇವೆರಡರಲ್ಲಿ ಯಾವುದು ನೌಕರನಿಗೆ ಅನುಕೂಲವಾಗಿದೆಯೊ ಅದನ್ನು ಕೊಡಬೇಕು. ಗ್ರಾಚ್ಯುಟಿ ನಿಯಮದ ಪ್ರಕಾರ ಪ್ರತಿವರ್ಷದ ಸೇವೆಗೂ 1 ತಿಂಗಳ ಮೂಲ ವೇತನವನ್ನು ಕೊಟ್ಟು ಹೊಸದಾಗಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉಪಾದಾನ ಪಾವತಿ ಕಾಯ್ದೆ 1962ರನ್ವಯ ಪಾವತಿ ಮಾಡತಕ್ಕದು ಎಂದು ಆದೇಶ ಹೊರಡಿಸಿದೆ ಎಂದರು.

ಉಪದಾನ ಪದ್ಧತಿ ಕಾನೂನುಬಾಹಿರ:

ಏಕಪಕ್ಷೀಯ ನಿರ್ದೇಶನದಿಂದ ಏ.10, 2002ರ ನಂತರ ನೇಮಕಾತಿಗೊಂಡಿರುವ 1 ಲಕ್ಷಕ್ಕೂ ಹೆಚ್ಚು ನೌಕರರಿಗೆ ಹಾಗೂ ಮುಂದೆ ಸಂಸ್ಥೆಗೆ ಸೇರಿಕೊಳ್ಳುವ ನೌಕರರಿಗೆ ಉಪಾದಾನ ಪಾವತಿಯಲ್ಲಿ ಸಾಕಷ್ಟು ನೌಕರರು ಲಕ್ಷ ಲಕ್ಷ ರೂ.ಗಳನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಈ ಮೇಲ್ಕಂಡ ಸುತ್ತೋಲೆಯು ಕಾನೂನು ಬಾಹಿರವಾಗಿದೆ. ಸಾರಿಗೆ ನಿಗಮಗಳಲ್ಲಿ ಇರುವ ಎಲ್ಲಾ ನೌಕರರಿಗೂ ಅನ್ವಯವಾಗುವಂತೆ ಇಎಸ್ಐ ಮಾದರಿಯಲ್ಲಿ ವೈದ್ಯಕೀಯ ಸೌಲಭ್ಯ ಕೊಡಬೇಕು ಎಂದು ಒತ್ತಾಯಿಸಿದರು.

ಅಂತರ್ ನಿಗಮ ವರ್ಗಾವಣೆ ಜೊತೆಗೆ ಎರಡು ಪಾಳಿಯಲ್ಲಿ ಸಂಚಾರಕ್ಕೆ ಅವಕಾಶ:

ಸಾವಿರಾರು ನೌಕರರು ಅಂತರ್​ನಿಗಮ ವರ್ಗಾವಣೆಗಳನ್ನು ಬಯಸಿದ್ದು, ಸರ್ಕಾರವು ಈ ವಿಷಯದಲ್ಲಿ ಒಂದು ಸಮಿತಿಯನ್ನು ರಚಿಸಿ ಈ ಸಮಿತಿಗೆ ಫೆಡರೇಷನ್ ಸಲ್ಲಿಸಿರುವ ಸೂಚನೆಗಳಂತೆ ಅಂತರ ನಿಗಮ ವರ್ಗಾವಣೆಗಳನ್ನು ಮಾಡಬೇಕು. ಘಟಕ ಮಟ್ಟದಿಂದ ವಿಭಾಗದ ಮಟ್ಟದವರೆಗೆ ಪ್ರತಿದಿನ ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದ್ದು, ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಕೋವಿಡ್-19 ಮಹಾಮಾರಿ ಒಕ್ಕರಿಸಿದ ಮೇಲೆ ರಾಜಾದ್ಯಂತ ಪೂರ್ಣವಾಗಿ 4 ನಿಗಮಗಳ ಸಾರಿಗೆ ಬಸ್​​ಗಳು ಸಂಪೂರ್ಣವಾಗಿ ಸಂಚರಿಸುತ್ತಿಲ್ಲ. ಆದ್ದರಿಂದ ಕರ್ತವ್ಯಕ್ಕೆ ಬಂದಿರುವ ಸಿಬ್ಬಂದಿಗಳಿಗೆ ಕೆಲಸ ಕೊಡದೇ ಅವರಿಗೆ ರಜೆ ಹಾಕುವಂತೆ ಒತ್ತಾಯಿಸಲಾಗಿದೆ. ರಜೆ ಇಲ್ಲದವರಿಗೆ ಅವರ ವೇತನ ಕಡಿತ ಮಾಡಲಾಗುತ್ತಿದೆ ಎಂದ ಅವರು, ಇದರಿಂದ ನೌಕರರ ವರ್ಗದವರಿಗೆ ಬಹಳ ಅನ್ಯಾಯವಾಗಿದೆ. ಕಾನೂನು ರೀತಿಯ ಕೆಲಸಕ್ಕೆ ಹಾಜರಾಗಿರುವ ಎಲ್ಲಾ ನೌಕರರಿಗೂ ಕೆಲಸ-ವೇತನ ಕೊಡಬೇಕು. ಕೆಲಸ ಕೊಡಲು ಆಗದಿದ್ದಲ್ಲಿ ಕಾನೂನು ಚೌಕಟ್ಟಿನಲ್ಲಿ ಸಂಬಳ ಕೊಡಬೇಕು. ಆದ್ದರಿಂದ ಬೆಂಗಳೂರು ನಗರದಂತಹ ದೊಡ್ಡ ನಗರಗಳಲ್ಲಿ ಎರಡು ಪಾಳಿಗಳಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕೊಡಬೇಕೆಂದು ಆಗ್ರಹಿಸಿದರು.

ನಾಲ್ಕು ನಿಗಮಗಳನ್ನ ವಿಲೀನ ಮತ್ತು ಟೋಲ್ ಮುಕ್ತಗೊಳಿಸಲು ಸರ್ಕಾರಕ್ಕೆ ಒತ್ತಾಯ:

ರಾಜ್ಯದ ನಾಲ್ಕು ಸಾರಿಗೆ ನಿಗಮಗಳನ್ನು ವಿಲೀನಗೊಳಿಸಿ ಪ್ರತಿವರ್ಷ ಆಯವ್ಯಯದಲ್ಲಿ ಸಾರಿಗೆ ನಿಗಮಗಳಿಗೆ ಒಂದು ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ಸರ್ಕಾರವು ಸಾರಿಗೆ ನಿಗಮಗಳ ನೌಕರರ ವೇತನವನ್ನು ಸಂಪೂರ್ಣವಾಗಿ ಭರಿಸಿ ಸರಕಾರ ಸಾರಿಗೆ ನಿಗಮಗಳ ಮೇಲೆ ಹೊರೆಸಿರುವ ಮೋಟಾರು ವಾಹನ ತೆರಿಗೆಯನ್ನು ರದ್ದು ಮಾಡಬೇಕು. ಸಾರಿಗೆ ನಿಗಮಗಳಿಗೆ ಹೆದ್ದಾರಿ ಸುಂಕದಿಂದ ವಿನಾಯಿತಿ ನೀಡಬೇಕು. ಸಾರಿಗೆ ನಿಗಮಗಳ ಇಂಧನದ ಮೇಲೆ ಹಾಕಿರುವ ಸುಂಕವನ್ನು ಶೇ.50 ಭಾಗ ಕಡಿಮೆಗೊಳಿಸಬೇಕು. ಹಾಗೂ ವಿದ್ಯಾರ್ಥಿಗಳ ರಿಯಾಯಿತಿ ಪಾಸುಗಳ ಹಿಂಬಾಕಿಯನ್ನ ತಕ್ಷಣ ಬಿಡುಗಡೆ ಮಾಡಬೇಕು ಸರ್ಕಾಕ್ಕೆ ಒತ್ತಾಯಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಆರ್​ಟಿಸಿ ಸ್ಟಾಫ್ ಅಂಡ್ ವರ್ಕಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಡಿ.ಎ. ವಿಜಯಭಾಸ್ಕರ್, ಖಜಾಂಚಿ ಹೆಚ್. ಚಂದ್ರೇಗೌಡ, ಜಂಟಿ ಕಾರ್ಯದರ್ಶಿ ಟಿ.ಎಲ್. ರಾಜಗೋಪಾಲ್, ಉಪಾಧ್ಯಕ್ಷರಾದ ಜಿ.ಟಿ. ರಂಗೇಗೌಡ, ಹಾಸನ ವಿಭಾಗ ಅಧ್ಯಕ್ಷ ಶಿವನಂಜೇಗೌಡ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details