ಕರ್ನಾಟಕ

karnataka

ETV Bharat / state

ಮುಸ್ಲಿಂ ಮುಖಂಡರೊಂದಿಗೆ ಪೊಲೀಸ್ ಅಧಿಕಾರಿಗಳ ಸಭೆ, ಕೊರೊನಾ ಕುರಿತು ಅಗತ್ಯ ಸೂಚನೆ

ಹಬ್ಬದ ದಿನಗಳಲ್ಲಿ ಕೈ ಕುಲುಕುವುದು ಮತ್ತು ಅಪ್ಪಿಕೊಳ್ಳುವುದು ಸಾಮಾನ್ಯ. ಸದ್ಯ ವೈರಾಣು ಹರಡುವ ಕಾರಣ ಈ ರೀತಿ ಮಾಡದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಹಬ್ಬ ಆಚರಿಸಬೇಕು..

sakaleshpur
sakaleshpur

By

Published : Jul 26, 2020, 6:09 PM IST

ಸಕಲೇಶಪುರ :ಹಸಿರು ವಲಯವಾಗಿದ್ದ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕರು ಆದಷ್ಟು ಎಚ್ಚರಿಕೆಯಿಂದ ಮತ್ತು ಜಾಗೃತೆಯಿಂದ ಇರಬೇಕು ಎಂದು ಡಿವೈಎಸ್‌ಪಿ ಗೋಪಿ ಸೂಚನೆ ನೀಡಿದರು.

ಇನ್ನೇನು ಕೆಲವೇ ದಿನಗಳಲ್ಲಿ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಆಚರಿಸುವ ಬಕ್ರೀದ್ ಹಬ್ಬ ಬರಲಿದೆ. ಈ ಸಂದರ್ಭದಲ್ಲಿ ಸರ್ಕಾರ ಮತ್ತು ಸ್ಥಳೀಯ ಆಡಳಿತ ನೀಡುವ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.

ಬಕ್ರೀದ್ ವೇಳೆ ಪಾಲಿಸಬೇಕಾದ ನಿಯಮಗಳು :

* ಪರವೂರಿನಿಂದ ಬರುವ ಅಪರಿಚಿತ ವೃಕ್ತಿಗಳ ಮೇಲೆ ನಿಗಾ ಇಡಬೇಕು

* ಮುಂಜಾಗೃತಾ ಕ್ರಮವಾಗಿ ಎಲ್ಲಾ ರೀತಿಯ ತಪಾಸಣೆ ಮಾಡಿದ ನಂತರವೇ ನಮಾಜ್ ಮಾಡಲು ಅವಕಾಶ ನೀಡಬೇಕು.

* ವಿಶೇಷ ಪ್ರಾರ್ಥನೆ ಸಲ್ಲಿಸುವ ಸಂದರ್ಭ ಮಸೀದಿಯ ಒಳಭಾಗದಲ್ಲಿ ಕನಿಷ್ಠ 6 ಅಡಿ ಅಂತರದಲ್ಲಿ ನಮಾಜು ನಿರ್ವಹಿಸಬೇಕು

* ಮಸೀದಿ ಪ್ರವೇಶಿಸುವವರನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಒಳಗೆ ಬಿಡಬೇಕು

* ಆವರಣದಲ್ಲಿ ಸ್ಯಾನಿಟೈಸರ್, ಸೋಪುಗಳನ್ನು ಕೈತೊಳೆದುಕೊಳ್ಳಲು ಇಡಬೇಕು.

* ನಮಾಜ್ ನಿರ್ವಹಿಸಲು ಬರುವವರು ಕಡ್ಡಾಯವಾಗಿ ಮನೆಯಿಂದ ಕಾರ್ಪೆಟ್‌ಗಳನ್ನು ತರಬೇಕು

* ಪರವೂರಿನಿಂದ ಹಬ್ಬಕ್ಕೆ ಕುಟುಂಬದವರು ಮತ್ತು ಆಪ್ತರನ್ನು ಬರ ಮಾಡಿಕೊಳ್ಳಬಾರದು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ

* 10 ವರ್ಷದೊಳಗಿನ ಮಕ್ಕಳು ಮತ್ತು 60 ವರ್ಷ ಮೇಲಿನ ವೃದ್ಧರು ಕಡ್ಡಾಯ ಮನೆಯಲ್ಲಿರಬೇಕು.

ಸರ್ಕಲ್ ಇನ್ಸ್‌ಪೆಕ್ಟರ್ ಗಿರೀಶ್ ಮಾತನಾಡಿ, ಹಬ್ಬದ ದಿನದಂದು ಪೊಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ಆಯೋಜಿಸಲಾಗುತ್ತದೆ. ಎಲ್ಲರೂ ಶೃದ್ಧೆಯಿಂದ ಪ್ರಾರ್ಥನೆ ಮಾಡಿದ ನಂತರ ಗುಂಪು ಕೂಡದೆ ಆದಷ್ಟು ಬೇಗ ಮನೆಗೆ ಹಿಂತಿರುಗಬೇಕು. ಹಬ್ಬದ ದಿನಗಳಲ್ಲಿ ಕೈ ಕುಲುಕುವುದು ಮತ್ತು ಅಪ್ಪಿಕೊಳ್ಳುವುದು ಸಾಮಾನ್ಯ. ಸದ್ಯ ವೈರಾಣು ಹರಡುವ ಕಾರಣ ಈ ರೀತಿ ಮಾಡದೆ ಸಾಮಾಜಿಕ ಅಂತರ ಕಾಪಾಡಿಕೊಂಡು ಹಬ್ಬ ಆಚರಿಸಬೇಕು ಎಂದರು.

ಜಾಮಿಯಾ ಲಬಾಬಿನ್ ಮಸೀದಿಯ ಕಾರ್ಯದರ್ಶಿ ಪೈಜಾನ್, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಜಾಕೀರ್ ಯಾದ್‌ಗಾರ್, ಆಚಂಗಿ ಮಸೀದಿಯ ಹಮೀದ್ ಹಾಗೂ ತಾಲೂಕಿನ ವಿವಿಧ ಮಸೀದಿಗಳ ಪದಾಧಿಕಾರಿಗಳು ಮತ್ತು ಮುಸ್ಲಿಂ ಮುಖಂಡರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

...view details