ಹಾಸನ: ಮೆಡಿಕಲ್ ಉದ್ಯಮಿಯೊಬ್ಬರನ್ನು ಅಪಹರಿಸಿ ಹಣ ಸುಲಿಗೆ ಮಾಡಿ, ದಾಖಲೆಗಳಿಗೆ ಬಲವಂತದಿಂದ ಸಹಿ ಮಾಡಿಸಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಮಂಗಳಾ ಆಸ್ಪತ್ರೆಯಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿರುವ ರಾಘವೇಂದ್ರ ನಗರದ ನಿವಾಸಿ ಸಂತೋಷ್ ಜೈನ್ ಅವರು ಕೆಲಸ ಮುಗಿಸಿ ಹೋಗುತ್ತಿದ್ದಾಗ, ಅವರನ್ನು ರಾಜೀವ್ ನರ್ಸಿಂಗ್ ಕಾಲೇಜು ಬಳಿ ಜೆಸಿಬಿ ಮಂಜ ಎಂಬಾತ ಹಾಗೂ ಇತರ 8 ಮಂದಿ ಕಾರಿನಲ್ಲಿ ಅಪಹರಿಸಿದ್ದಾರೆ. ಬಳಿಕ ಅವರನ್ನು ನಗರದಿಂದ ಹೊರಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಅವರ ಬಳಿಯಿದ್ದ 1.30 ಲಕ್ಷ ರೂ. ಕಿತ್ತುಕೊಂಡು, ಮೊದಲೇ ಸಿದ್ದಪಡಿಸಿದ್ದ ದಾಖಲೆಗಳಿಗೆ ಅವರಿಂದ ಸಹಿ ಹಾಕಿಸಿಕೊಂಡು ನಂತರ ಬಿಡುಗಡೆ ಮಾಡಿದ್ದಾರೆ.