ಕರ್ನಾಟಕ

karnataka

ETV Bharat / state

ರಾಮನಹಳ್ಳಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಅರಣ್ಯ ಪ್ರದೇಶ - ರಾಮನಹಳ್ಳಿ ಅರಣ್ಯ ಪ್ರದೇಶ ಬೆಂಕಿಗಾಹುತಿ

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಣಕಟ್ಟೆ ಸಮೀಪದ ರಾಮನಹಳ್ಳಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅಪಾರ ಅರಣ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ.

fire in forest
ರಾಮನಹಳ್ಳಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ

By

Published : Mar 16, 2021, 8:37 PM IST

ಹಾಸನ/ಅರಸೀಕೆರೆ: ಆಕಸ್ಮಿಕವಾಗಿ ಬೆಂಕಿ ಬಿದ್ದ ಹಿನ್ನೆಲೆ ಭಾಗಶಃ ರಾಮನಹಳ್ಳಿ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರೋ ಘಟನೆ ನಡೆದಿದೆ.

ರಾಮನಹಳ್ಳಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಣಕಟ್ಟೆ ಸಮೀಪದ ರಾಮನಹಳ್ಳಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಸುಮಾರು 2 ಕಿ.ಮೀ. ಅರಣ್ಯ ಪ್ರದೇಶಕ್ಕೆ ಬೆಂಕಿಯ ಕೆನ್ನಾಲಿ ಹರಡಿದ್ದರಿಂದ ಸಾಕಷ್ಟು ಗಿಡ ಮರಗಳು ಸುಟ್ಟು ಹೋಗಿವೆ. ಬೆಂಕಿ ಬಿದ್ದು ಗಂಟೆಯಾದ್ರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸದ ಹಿನ್ನೆಲೆ ಸ್ಥಳೀಯರು ಆಕ್ರೋಶ ವ್ಯಕ್ಕಪಡಿಸಿದ್ರು. ಬಳಿಕ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದರಾದರೂ ಅಷ್ಟರೊಳಗೆ ಬೆಂಕಿಗೆ ಸಾಕಷ್ಟು ಕಾಡಿನ ಸಂಪತ್ತು ನಾಶವಾಗಿತ್ತು.

ABOUT THE AUTHOR

...view details