ಹಾಸನ: ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ನಿವೃತ್ತ ನೌಕರರಿಗೆ ಬಾಕಿ ಉಳಿಸಿಕೊಂಡಿರುವ ಪಿಂಚಣಿ ಹಣ ಕೊಡದಿದ್ದರೆ ಡಿಸಿಸಿ ಬ್ಯಾಂಕ್ ಎದುರು ನೌಕರರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೆಚ್ಡಿಸಿಸಿ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಎನ್.ಕಾಳೇಗೌಡ ಎಚ್ಚರಿಸಿದ್ದಾರೆ.
ಪಿಂಚಣಿ ಹಣ ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ - ಟಿ.ಎನ್.ಕಾಳೇಗೌಡ
ಜಿಲ್ಲಾ ಸಹಕಾರ ಬ್ಯಾಂಕ್ ನಿವೃತ್ತ ನೌಕರರಿಗೆ ಬಾಕಿ ಉಳಿಸಿಕೊಂಡಿರುವ ಪಿಂಚಣಿ ಹಣ ಕೊಡಬೇಕೆಂದು ಹೆಚ್ಡಿಸಿಸಿ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಎನ್.ಕಾಳೇಗೌಡ ತಿಳಿಸಿದರು.
![ಪಿಂಚಣಿ ಹಣ ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ](https://etvbharatimages.akamaized.net/etvbharat/images/768-512-2702807-729-cd874a64-8f39-4f71-8258-c9ce8a73a4ef.jpg)
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 6 ವರ್ಷಗಳಿಂದ 132 ನಿವೃತ್ತ ಬ್ಯಾಂಕ್ ನೌಕರರಿಗೆ ಪಿಂಚಣಿ ಹಣ ಕೊಟ್ಟಿಲ್ಲ. ನಿವೃತ್ತಿ ನಂತರ ಜೀವನವೇ ದುಸ್ಥರವಾಗಿದೆ. ಈಗಾಗಲೇ 21 ನಿವೃತ್ತ ನೌಕರರು ಮೃತಪಟ್ಟಿದ್ದಾರೆ. ಪಿಂಚಣಿ ಹಣ ಸಿಗದೆ ಹಲವು ಮಂದಿ ಜೀವನ ನಿರ್ವಹಣೆಗೆ ಪೆಟ್ರೋಲ್ ಬಂಕ್, ಕಸ ಗುಡಿಸುವುದು, ಹೋಟೆಲ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಕಿ ಕೊಡಬೇಕಾದ ಪಿಂಚಣಿ ಹಣ ಕೇಳಲು ಮುಂದಾದರೆ ಬ್ಯಾಂಕ್ನ ಆಡಳಿತ ಮಂಡಳಿ ಒಪ್ಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಹಣವನ್ನ ತಮ್ಮಲ್ಲೇ ಇಟ್ಟುಕೊಂಡು (ಕಾರ್ಪ್) ಅದರಿಂದ ಬರುವ ಬಡ್ಡಿಯಿಂದ ಪಿಂಚಣಿ ನೀಡುವಂತೆ ಸ್ಪಷ್ಟಪಡಿಸಿದೆ. ಹೀಗಿದ್ದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇಳಿ ವಯಸ್ಸಿನಲ್ಲಿ ಕೂಲಿ ಮಾಡಬೇಕಾದ ಅನಿವಾರ್ಯ ಎದುರಾಗಿದೆ. ಕೆಲವು ಮಕ್ಕಳು ಪೋಷಕರನ್ನು ಮನೆಯಿಂದ ಓಡಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.