ಕರ್ನಾಟಕ

karnataka

ETV Bharat / state

ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಹಲವು ಸಂಘಟನೆಗಳ ಒಕ್ಕೂರಲ ಪ್ರತಿಭಟನೆ

ಲಾಕ್​​​ಡೌನ್ ಕಾಲಾವಧಿಯ ಪೂರ್ಣ ವೇತನ ಸಿಗದ ಕಾರಣ ಸಂಘಟಿತ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ ಡೌನ್‌ ಕಾಲಾವಧಿಯ ಪೂರ್ಣ ವೇತನ ಲಭಿಸಿಲ್ಲ. ವೇತನವನ್ನು ಮುಂಗಡವಾಗಿ ನೀಡಿ ಅದಕ್ಕಾಗಿ ಪರ್ಯಾಯ ದಿನ ಕೆಲಸಕ್ಕೆ ಮಾಲೀಕರು ಒತ್ತಾಯಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

Many organizations are protesting to fulfill various demands
ಬೇಡಿಕೆಗಳ ಈಡೇರಿಕೆಗೆ ಸಂಘಟನೆಗಳ ಪ್ರತಿಭಟನೆ

By

Published : Sep 24, 2020, 7:56 PM IST

ಹಾಸನ: ಲಾಕ್​ಡೌನ್‌ನಲ್ಲಿ ಸಂತ್ರಸ್ತರಿಗೆ ಪರಿಹಾರ, ಆರ್ಥಿಕ ಪುನಶ್ಚೇತನ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಸಮಸ್ಯೆಗಳ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾನಾ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಿ.ಎಂ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ತಲುಪಿತು. ಮಾರ್ಚ್ 23ರಿಂದ ಆರಂಭವಾದ ಲಾಕ್​​ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕತೆಯು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದ ಸಂಘಟಿತ ವಲಯದ ಕೈಗಾರಿಕಾ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ರೈತಾಪಿ ಜನತೆ ಹಾಗೂ ಇತರೆ ಎಲ್ಲಾ ವಿಭಾಗದ ಜನತೆಯು ಇದರಿಂದಾಗಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಸುವಂತೆ ಹಲವು ಸಂಘಟನೆಗಳ

ಕೊರೊನಾ ಸೋಂಕು ಹೆಚ್ಚುತ್ತಿದ್ದು ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳು ಹೆಚ್ಚಿವೆ. ಪರಿಣಾಮವಾಗಿ ಜನತೆ ಆತಂಕದಿಂದಲೇ ಆರ್ಥಿಕ ಚಟುವಟಿಕೆಗಳಲ್ಲಿ ಮತ್ತು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಕೊಳ್ಳುವಂತಾಗಿದೆ ಎಂದರು.

ಲಾಕ್​​​ಡೌನ್ ಕಾಲಾವಧಿಯ ಪೂರ್ಣ ವೇತನ ಸಿಗದ ಕಾರಣ ಸಂಘಟಿತ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ ಡೌನ್‌ ಕಾಲಾವಧಿಯ ಪೂರ್ಣ ವೇತನ ಲಭಿಸಿಲ್ಲ. ನೀಡಿರುವ ವೇತನವನ್ನು ಮುಂಗಡವಾಗಿ ನೀಡಿ ಅದಕ್ಕಾಗಿ ಪರ್ಯಾಯ ದಿನದ ಕೆಲಸಕ್ಕೆ ಮಾಲೀಕರು ಒತ್ತಾಯಿಸುತ್ತಿದ್ದಾರೆ ಎಂದು ದೂರಿದರು.

ಆರೋಗ್ಯ ಸೇವೆಯಲ್ಲಿ ತೊಡಗಿರುವ ಕೋವಿಡ್ ಸೇನಾನಿಗಳಾದ ವೈದ್ಯರು, ಸುಶ್ರೂಕಿಯರು, ವೈದ್ಯಕೀಯ, ಅರೆವೈದ್ಯಕೀಯ ಮತ್ತು ವೈದ್ಯಕಿಯೇತರ​ ಸಿಬ್ಬಂದಿ, ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು, ಮುನ್ಸಿಪಾಲ್ ನೌಕರರು, ಗ್ರಾಮ ಪಂಚಾಯಿತಿ ನೌಕರರು ಮುಂತಾದವರಿಗೆ ಅಗತ್ಯ ಪಿಪಿಇ ಕಿಟ್​​​​ಗಳು, ವೇತನ ಹಾಗೂ ಪ್ರೋತ್ಸಾಹ ಭತ್ಯೆಯನ್ನು ನೀಡುವುದರೊಂದಿಗೆ ಅವರ ಆರೋಗ್ಯದ ಸಂರಕ್ಷಣೆಗೆ ಅಗತ್ಯ ಕ್ರಮಗಳಾಗಬೇಕಿದೆ. ಅದರಲ್ಲಿನ ಲೋಪದಿಂದಾಗಿ ಈಗಾಗಲೇ ನೂರಾರು ಜನ ತಮ್ಮ ಪ್ರಾಣವನ್ನು ತೆತ್ತಬೇಕಾಗಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರು ಮೇ ತಿಂಗಳಿನಿಂದ 4 ತಿಂಗಳ ಕಾಲ ನಿಗಮದ ಎಲ್ಲಾ ವಾಹನಗಳ ಸಂಪೂರ್ಣ ಕಾರ್ಯಚರಣೆ ಪ್ರಾರಂಭಿಸುವವರೆಗೂ ಹಾಜರಾತಿ ನೀಡಿ, ಗೈರುಹಾಜರಿ ನಮೂದಿಸಿರುವುದನ್ನು ರದ್ದುಪಡಿಸಬೇಕು. ಸರ್ಕಾರದಿಂದ ಬಾಕಿ ಹಣವನ್ನು ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details