ಹಾಸನ:ಹಾಸನಾಂಬೆ ದೇವಿ ದರ್ಶನ ಮಾಡುವಾಗ ಕೆಲ ಭಕ್ತರು ಕಾಣಿಕೆಯಾಗಿ ಹಣ, ಚಿನ್ನ, ಬೆಳ್ಳಿ ಹಾಕಿದರೆ, ಇನ್ನು ಕೆಲವರು ವರ ನೀಡುವಂತೆ ಮನವಿ ಮಾಡಿರುವ ಬೇಡಿಕೆಯ ಪತ್ರಗಳು ಕಾಣಿಕೆ ಹುಂಡಿಗಳಲ್ಲಿ ಹಾಕಿರುವುದು ಹಣ ಏಣಿಕೆ ವೇಳೆ ಕಂಡು ಬಂದಿವೆ.
ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಸ್ಥಾನದ ಬಾಗಿಲು 12 ದಿನಗಳು ತೆರೆದಿದ್ದರೂ ಸಹ ಕೊನೆ 2 ದಿನಗಳ ಕಾಲ ಸಾರ್ವಜನಿಕರಿಗೆ ದರ್ಶನ ನೀಡಿ ಈಗಾಗಲೇ ಬಾಗಿಲಿಗೆ ಬೀಗ ಹಾಕಲಾಗಿದೆ. ಈ ವೇಳೆ ಭಕ್ತರಿಂದ ಬೇಡಿಕೆ ಈಡೇರಿಸಲು ಬಂದ ವಿಭಿನ್ನ ಪತ್ರಗಳು ನೂರಾರು ಇದ್ದವು. ಅನೇಕ ಪತ್ರಗಳಲ್ಲಿ ಬರೆದವರ ಹೆಸರು ಹಾಕಿದ್ದರೆ, ಉಳಿದ ಪತ್ರಗಳಲ್ಲಿ ಹೆಸರು ಇಲ್ಲದೆ ಬೇಡಿಕೆ ಮಾತ್ರ ಕಂಡುಬಂದವು.
ನನಗೆ ನನ್ನ ಹೆಂಡತಿ ಮಕ್ಕಳು ಬೇಕು,. ನಾನು ಕುಡಿಯುವುದಿಲ್ಲ,. ಸಂಜೆ ಸ್ವಲ್ಪ ಸ್ವಲ್ಪ ಅಷ್ಟೇ ತೆಗೆದುಕೊಳ್ಳುತ್ತೇನೆ,. ಕೆಲಸ ಪರ್ಮೆಂಟ್ ಆಗಲಿ ತಾಯಿ,. ನನಗೆ ಮದುವೆ ಆಗಬೇಕು ಅಮ್ಮ,. ಹಾಗೆಯೇ ಕೊರೊನಾ ಎಂದು ಹೇಳಿ ತಮಗೆ ಬೇಕಾದವರಿಗೆ ಪಾಸ್ ಕೊಟ್ಟು ದೇವರ ದರ್ಶನ ಮಾಡಿಸಿದ್ದಾರೆ ಎಂದು ಜಿಲ್ಲಾಡಳಿತದ ವಿರುದ್ಧವೇ ದೂರಿನ ಪತ್ರ ಬರೆದಿದ್ದಾರೆ.
ದೊಡ್ಡ ಮೊತ್ತದ ಲಾಟರಿ ಹೊಡೆಸು ತಾಯಿ, ಕುಟುಂಬದವರನ್ನು ಕಾಪಾಡು ತಾಯಿ,. ಪ್ರಾಣಿ ಪಕ್ಷಿಗಳನ್ನು ಕಾಪಾಡು ತಾಯಿ,. ಅಮ್ಮ ನನಗೆ ಒಳ್ಳೆ ವರ ಕೊಡಮ್ಮ, ಆಮೇಲೆ ನನಗೆ ಮದುವೆ ಆಗಬೇಕು ಅಮ್ಮ ಎಂದು ಭಕ್ತರೊಬ್ಬರು ಪತ್ರ ಬರೆದಿದ್ದಾರೆ.